Select Page

Advertisement

ಬೆಳಗಾವಿ : ಅನಾರೋಗ್ಯದಿಂದ ಅಸುನೀಗಿದ ಗಂಡು ಹುಲಿ ಶೌರ್ಯ

ಬೆಳಗಾವಿ : ಅನಾರೋಗ್ಯದಿಂದ ಅಸುನೀಗಿದ ಗಂಡು ಹುಲಿ ಶೌರ್ಯ

ಬೆಳಗಾವಿ : ನಗರದ ಹೊರವಲಯದಲ್ಲಿರುವ ಭೂತರಾಮನಹಟ್ಟಿ ಕಿರು‌ ಮೃಗಾಲಯದಲ್ಲಿದ್ದ ಗಂಡು ಹುಲಿ ಶೌರ್ಯ (13 ) ಭಾನುವಾರ ಬೆಳಿಗ್ಗೆ ಅಸುನೀಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮ‌ ಕಿರು ಮೃಗಾಲಯದಲ್ಲಿದ್ದ ಗಂಡು ಹುಲಿ ಶೌರ್ಯನ ರಕ್ತದಲ್ಲಿ ಮೈಕ್ರೊಪ್ಲಾಸ್ಮಾ, ಸೈಟೌಕ್ಸೋನೋಸಿಸ್ ಮತ್ತು ಬೇಬಿಸಿಯೋಸಿಸ್ ಎಂಬ ಅತ್ಯಂತ ವಿರಳ ಕಾಯಿಲೆಯಿಂದ ಬಳಲುತ್ತಿತ್ತು.‌ ಕಳೆದ 21 ದಿನಗಳಿಂದ ನಿರಂತರ ಚಿಕಿತ್ಸೆ ನೀಡಿದರು ಫಲಕಾರಿಯಾಗಿದೆ ಭಾನುವಾರ ನಿಧನ ಹೊಂದಿದೆ.

2021ರಲ್ಲಿ ಬನ್ನೇರಘಟ್ಟ ಮೃಗಾಲಯದಿಂದ ಬೆಳಗಾವಿ ಕಿರು ಮೃಗಾಲಯಕ್ಕೆ ಶೌರ್ಯನನ್ನು ಸ್ಥಳಾಂತರ ಮಾಡಲಾಗಿತ್ತು. ಸಧ್ಯ ಮೃತಪಟ್ಟ ಹುಲಿ ದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ‌ ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!