Select Page

Advertisement

ಸೋಲಿನ‌‌ ನಂತರ ಮುಸ್ಲಿಂ ಮತದಾರರ ವಿರುದ್ಧ ನಿಖಿಲ್ ಕಿಡಿ

ಸೋಲಿನ‌‌ ನಂತರ ಮುಸ್ಲಿಂ ಮತದಾರರ ವಿರುದ್ಧ ನಿಖಿಲ್ ಕಿಡಿ

ಬೆಂಗಳೂರು : ಈ ಹಿಂದೆ ಮುಸ್ಲಿಂ ಸಮುದಾಯಕ್ಕೆ ‌ಮೀಸಲಾತಿ‌ ಸೇರಿದಂತೆ ಮಾಜಿ ಪ್ರಧಾನಿ ದೇವೆಗೌಡ ಅವರು ಒಳ್ಳೆಯ ನಿರ್ಣಯ ಕೈಗೊಂಡಿದ್ದರು ಸಮುದಾಯ‌ ನಮ್ಮ ಪರ ನಿಲ್ಲಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.‌

ಚನ್ನಪಟ್ಟಣ ಸೋಲಿನ ಜೊತೆ ಸತತ ಮೂರು ಚುನಾವಣೆಯಲ್ಲಿ ಸೋತು ನಿಖಿಲ್ ಕುಮಾರಸ್ವಾಮಿ ಕಂಗಾಲಾಗಿದ್ದಾರೆ. ಈ ಬಾರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಮೈತ್ರಿ ಪಕ್ಷಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಸೋಲಿನ‌ ರುಚಿ ತೋರಿಸಿದ್ದಾರೆ.

ಸಧ್ಯ ತಮ್ಮ ಸೋಲಿನ‌ ಕುರಿತು ಪರಾಮರ್ಶೆ ಮಾಡಿರುವ ನಿಖಿಲ್ ಕುಮಾರಸ್ವಾಮಿ ಮುಸ್ಲಿಂ ಮತದಾರರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಚುನಾವಣೆಯಲ್ಲಿ ಆ ಸಮಯದವರನ್ನು ಜೊತೆಗೆ ತಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು ಅವರಿಗೆ ನಮ್ಮ ಅವಶ್ಯಕತೆ ಇಲ್ಲ ಎಂದು ಫಲಿತಾಂಶದಿಂದ ಸಾಬಿತಾಗಿದೆ ಎಂದು ಹೇಳಿದರು.

ಈ ಕುರಿತು ಮುಂದಿನ ದಿನಗಳಲ್ಲಿ ಯೋಚಿಸಿ ಎಲ್ಲರನ್ನೂ ಒಟ್ಟಾಗಿ ತಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ ಎಂದು‌ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

Advertisement

Leave a reply

Your email address will not be published. Required fields are marked *

error: Content is protected !!