ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಮುಂದುವರಿದಿದ್ದು ಸಧ್ಯ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

220 ಕ್ಷೇತ್ರಗಳಲ್ಲಿ ಮಹಾಯುತಿ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ – 126, ಶಿವಸೇನೆ ( ಉದ್ಧವ್ ಠಾಕ್ರೆ ) – 57 ಹಾಗೂ ಎನ್ ಸಿ ಪಿ ( ಅಜಿತ್ ಪವಾರ್ ) – 37 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಹಾ ವಿಕಾಸ್ ಅಘಾಡಿಗೆ ಹಿನ್ನಡೆ ಉಂಟಾಗಿದ್ದು ಕೇವಲ 52 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ – 22, ಶಿವಸೇನೆ ( ಉದ್ಧವ್ ಠಾಕ್ರೆ ) – 17, ಎನ್ ಸಿ ಪಿ ( ಶರದ್ ಪವಾರ್ ) – 13 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ.