ಚನ್ನಪಟ್ಟಣ ಸೋತರೆ ನಾನೇ ಸೋತಂತೆ ; ಡಿ.ಕೆ ಶಿವಕುಮಾರ್ ಹೀಗೆ ಹೇಳಿದ್ದೇಕೆ..?
ಬೆಂಗಳೂರು : ಚುನಾವಣೆ ಮುಂಚೆ ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂದು ಹೇಳಿದ್ದೆ, ಒಂದು ವೇಳೆ ಸೋತರೆ ನಾನೇ ಸೋತಂತೆ. ಚನ್ನಪಟ್ಟಣ ಗೆದ್ದೇ ಗೆಲ್ಲುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ರಾಜ್ಯದ ಮೂರು ಕ್ಷೇತ್ರ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಉಪ ಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದ್ದು, ಮೂರು ಕ್ಷೇತ್ರ ಸೇರಿದಂತೆ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಉಪ ಚುನಾವಣೆ ಸಂದರ್ಭದಲ್ಲಿ ಸಚಿವ ಜಮೀರ್ ಆಡಿರುವ ಮಾತಿನಿಂದ ಹಿನ್ನಡೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ಜಮೀರ್ ಹೇಳಿಕೆಯನ್ನು ನಾನು ಹಾಗೂ ಸಿಎಂ ಖಂಡಿಸಿದ್ದೇವೆ ಎಂದು ಹೇಳುವ ಮೂಲಕ ತೀಕ್ಷ್ಣ ಉತ್ತರ ನೀಡಿದರು.
ಚುನಾವಣಾ ಪೂರ್ವದಲ್ಲಿ ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ, ನನ್ನ ಮುಖ ನೋಡಿ ಜನ ಮತ ನೀಡಬೇಕು ಎಂದು ಡಿಕೆ.ಶಿವಕುಮಾರ್ ಹೇಳಿದ್ದರು. ನಾಳೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಜನ ಯಾರಿಗೆ ಆಶಿರ್ವಾದ ಮಾಡುತ್ತಾನೆ ಎಂದು ಕಾದು ನೋಡಬೇಕು.


