ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಮನೆಯ ಕಟ್ಟಿಯ ಮೇಲೆ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿ ಮೂವರು ಆರೋಪಿಗಳನ್ನು ನೇಸರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ಚಿಯಾಗಿದ್ದಾರೆ.

ಮನೆಯ ಕಟ್ಟಿಯ ಮೇಲೆ ಮಲಗಿದ್ದ ನಿಂಗಪ್ಪ ಅರವಳ್ಳಿ ಕೊಚ್ಚಿ ಕೊಲೆ ಮಾಡಲು ಆತನ ಪತ್ನಿಯೇ ಸುಪಾರಿ ಕೊಟ್ಟು ಕೊಲೆ ‌ಮಾಡಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ನಿಂಗಪ್ಪನ ಪತ್ನಿ ನಿಲ್ಲಮ್ಮ ಹಾಗೂ ವಣ್ಣೂರು ಗ್ರಾಮದ ಯುವಕನ ಜೊತೆಗಿನ ಗೆಳೆಯ ಮಹೇಶ ಗೂಳನ್ನರ್ ಸೇರಿಕೊಂಡು ಪಕ್ಕದ ಗ್ರಾಮದ ಯಲ್ಲಪ್ಪನಿಗೆ ಸೂಪಾರಿ ಕೊಟ್ಟು ಕೊಲೆ ಮಾಡಲು ಹೇಳಿದ್ದಳು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ನೇಸರಗಿ ಸಿಪಿಐ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕೊಲೆಯಾದ 24 ಗಂಟೆಯಲ್ಲಿ ಈ ಪ್ರಕರಣವನ್ನು ನೇಸರಗಿ ಪೊಲೀಸರು ಬೇಧಿಸಿದ್ದಾರೆ‌.

ನೇಸರಗಿ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.