Select Page

Advertisement

ಚಿಕ್ಕೋಡಿ : ತಾಯಿ-ಮಗು ಆಸ್ಪತ್ರೆಯಲ್ಲಿ ಮಹಿಳೆ ಸಾವು

ಚಿಕ್ಕೋಡಿ : ತಾಯಿ-ಮಗು ಆಸ್ಪತ್ರೆಯಲ್ಲಿ ಮಹಿಳೆ ಸಾವು

ಚಿಕ್ಕೋಡಿ : ಇನ್ನೂ ಉದ್ಘಾಟನೆಯಾಗದ ತಾಯಿ-ಮಗು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ಇಲ್ಲಿನ ಬಾಣಂತಿಖೋಡಿ ತಾಯಿ- ಮಗು ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.

ಹೆರಿಗೆಗಾಗಿ ದಾಖಲಾದ ಮಹಿಳೆಗೆ ಸೂಕ್ತ ಚಿಕಿತ್ಸೆ -ಸಿಗದೆ ಮೃತಪಟ್ಟಿದ್ದಾಳೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಮೃತಳನ್ನು ಜಾರಿ ಗಲ್ಲಿ ಫೀಜಾ ಆತಿಫ್ ಸನದಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಹೆರಿಗೆಂದು ಇಲ್ಲಿನ ತಾಯಿ-ಮಗು ಆಸ್ಪತ್ರೆಗೆ ದಾಖಲಾಗಿದ್ದಳು ಎಂದು ಪೋಷಕರು ತಿಳಿಸಿದ್ದಾರೆ.

ರಾಜ್ಯ-ಕೇಂದ್ರ ಸರಕಾರ ಅತಿ ಕಡು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನೀಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು ತಾಯಿ-ಮಗು ಆಸ್ಪತ್ರೆ ಪ್ರಾರಂಭಿಸಿದ್ದರು. ಅದೇ ಆಸ್ಪತ್ರೆಯಲ್ಲಿ ಬಾಣಂತಿ ಪ್ರಾಣ ಚೆಲ್ಲಿರುವುದು ಇದೀಗ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ. ಮಹಿಳೆ ಸಾವಿನ ಬಗ್ಗೆ ಎಸಿ ಸುಭಾಸ ಸಂಪಗಾಂವಿ ಖಚಿತಪಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!