ಬೆಳಗಾವಿ : ಖಡಕ್ ಐಪಿಎಸ್ ಅಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕ್ರೈಂ ರೆಕಾರ್ಡ್ ಬ್ಯೂರೋ ಎಸ್ಪಿಯಾಗಿದ್ದ ಲಕ್ಷ್ಮಣ ನಿಂಬರಗಿ ಅವರನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ‌. ಶಾಂತನು ಸಿನ್ಹಾ ಅವರನ್ನು ಸಿಐಡಿ ಡಿಐಜಿ ಯಾಗಿ‌ ವರ್ಗಾವಣೆ ಮಾಡಲಾಗಿದೆ.

ಜಿ.ಸಂಗೀತ ಅವರನ್ನು ಸಿಐಡಿ ಎಸ್ಪಿ ಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಿ ಎಮ್ ಟಿಸಿ ವಿಜಲೆನ್ಸ್ ಡೈರೆಕ್ಟರ್ ಆಗಿ ಅಬ್ದುಲ್ ಅಹಾದ್, ಶಿವಾಂಶು ರಜಪೂತ್​​​ ಅವರನ್ನು ಎಸ್ಸಿಆರ್ಬಿ ಎಸ್​ಪಿಯಾಗಿ ವರ್ಗಾವಣೆ ಮಾಡಿದ್ದು, ಪೃಥ್ವಿಕ್​​ ಶಂಕರ್​​ ಅವರನ್ನು ಯಾದಗಿರಿ ಎಸ್​ಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.