
ವಕ್ಪ್ ಅವಾಂತರ ವಿರೋಧಿಸಿ ದರ್ಗಾದಲ್ಲಿ ಸಭೆ ಕರೆದ ಮುಸ್ಲಿಂ ಮುಖಂಡರು

ಅಥಣಿ : ತಾಲೂಕಿನ ಅನಂತಪೂರ ಗ್ರಾಮದ ದರ್ಗಾದಲ್ಲಿ ಸಭೆ ಮಾಡಿದ ರೈತರು, ಕಾಗವಾಡ ಹಾಗೂ ಅಥಣಿ ಶಾಸಕರಿಗೆ ಬರುವ ನವ್ಹೆಂಬರ್ 25 ರ ಒಳಗಾಗಿ ಅನಂತಪೂರ, ಬಳ್ಳಿಗೇರಿ ಗ್ರಾಮದ 60 ಕ್ಕೂ ಅಧಿಕ ಜನ ರೈತರ ಜಮೀನಿನ ಪಹಣಿಯಲ್ಲಿ ನೊಂದಣಿಯಾದ ‘ವಕ್ಪ್’ ಹೆಸರು ತೆರವುಗೊಳಿಸಬೇಕು ಇಲ್ಲವಾದರೆ ಸರಕಾರದ ವಿರುದ್ದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಣಯ ಮಾಡಿದರು.
ಈ ಸಭೆಯ ನೇತೃತ್ವ ವಹಿಸಿದ್ದ ಮುಖಂಡ ಸಂಪತಕುಮಾರ ಶೆಟ್ಟಿ ಅವರು ಮಾತನಾಡಿ ಕೇವಲ ಎರಡು ಗ್ರಾಮಗಳ 60 ಕ್ಕೂ ಅಧಿಕ ರೈತರ 500 ಎಕರೆಗೂ ಅಧಿಕ ಜಮೀನು ವಕ್ಪ್ ಎಂದು 2018 ರಲ್ಲಿ ನೊಂದಣಿಯಾಗಿದೆ, ಮುಖ್ಯಮಂತ್ರಿ ಅವರು ಇತ್ತೀಚಿನ ನೋಟಿಸ್ ಮರಳಿ ಪಡೆಯಲು ತಿಳಿಸಿದ್ದಾರೆ ಆದರೆ ಈ ಹಿಂದೆ ಬಂದಂತಹ ರೈತರ ಪಾಡು ಏನು. ಅವರು ಯಾರನ್ನ ಕೇಳಬೇಕು, ಅವರಿಗೆ ಯಾರು ನ್ಯಾಯ ಕೊಡಿಸುವವರು ಎಂದು ಪ್ರಶ್ನಿಸಿದರು.
ಇಂದು ಸಭೆಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಅನೇಕ ಗ್ರಾಮಗಳ 60 ಕ್ಕೂ ಅಧಿಕ ಜನ ರೈತರು ಸಭೆ ಮಾಡಿ ಇಬ್ಬರೂ ಶಾಸಕರಿಗೆ ಗಡುವು ಕೊಟ್ಟಿದ್ದು ಇಬ್ಬರು ಶಾಸಕರು ಯಾವ ರೀತಿ ಸ್ಪಂದಿಸುತ್ತಾರೆ ಎಂದು ನೋಡಿಕೊಂಡು ಅಹೋರಾತ್ರಿ ಧರಣಿ ಮಾಡುವುದಾಗಿ ನಿರ್ಣಯ ಮಾಡಿದ್ದೆವೆ ಎಂದರು. ಈ ಕುರಿತು ಅನೇಕ ರೈತರು ಮಾತನಾಡಿ 2018 ರಲ್ಲಿ ಪಹಣಿಯಲ್ಲಿ ಬಂದಿದ್ದ ವಕ್ಪ್ ತೆರವುಗೊಳಿಸಿ ಇಲ್ಲವಾದರೆ ನಾವು ಎಂತಹ ಹೋರಾಟ ಮಾಡಲು ಸಿದ್ದರಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಅಪ್ಪನಗೌಡ ಬಿರಾದಾರ, ರಾಯಗೊಂಡ ಮೇತ್ರಿ, ರಾಜೇಸಾಬ ಮುಲ್ಲಾ, ಪೈಗಂಬರ ಮುಲ್ಲಾ, ಸಂಗಪ್ಪಗೌಡ ಪಾಟೀಲ, ರಾಜೇಸಾಬ ಮುಜಾವರ, ಶಂಕರ ಚವ್ಹಾಣ, ರಂಜಾನ ಮುಲ್ಲಾ, ದಾವಲ್ ಮುಲ್ಲಾ, ಗುಲಾಬ
ಮುಲ್ಲಾ, ಅರಮಾನ ಮುಲ್ಲಾ, ನೂರಾಹ್ಮದ ಮುಜಾವರ, ನಬಿಸಾಬ ಮುಜಾವರ, ಶಂಸುದ್ದೀನ ಮುಲ್ಲಾ, ಶಫೀಕ ಮುಜಾವರ, ಅಬ್ದುಲ್ ಮುಲ್ಲಾ, ಝುಲೇಖಾನ ಮುಲ್ಲಾ, ಅಲ್ಲಾಸಾಬ ಮುಲ್ಲಾ, ಇಲಾಯಿ ಮುಜಾವರ, ಜಮಾಲ್ ಮುಲ್ಲಾ ಸೇರಿದಂತೆ ಅನೇಕರಿದ್ದರು.