Select Page

Advertisement

ವಕ್ಫ್ ವಿವಾದ ; ರೈತರ ವಿರುದ್ಧ ಕ್ರಮ ಜರುಗಿಸಿದರೆ ಹುಷಾರ್ ಎಂದ ಸಿಎಂ

ವಕ್ಫ್ ವಿವಾದ ; ರೈತರ ವಿರುದ್ಧ ಕ್ರಮ ಜರುಗಿಸಿದರೆ ಹುಷಾರ್ ಎಂದ ಸಿಎಂ

ಬೆಂಗಳೂರು : ವಕ್ಫ್ ವಿವಾದದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ರಾಜ್ಯ ಸರ್ಕಾರದಿಂದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ರೈತರ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಆದೇಶ ನೀಡಿದ್ದಾರೆ.

ಈ ಕುರಿತು ಸೂಚನೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು. ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಹಾಗೂ ಯಾವುದೇ ಪ್ರಾಧಿಕಾರದಿಂದ ನಿಡಲಾದ ನಿರ್ದೇಶನಗಳನ್ನು ತಕ್ಷಣವೇ ಸ್ಥಗಿತಗೊಳಿಸುವುದು. ಈ ಕುರಿತು ನೀಡಲಾದ ಎಲ್ಲಾ ನೋಟಿಸ್ ಹಿಂಪಡೆಯುವುದು.

ಸದರಿ ಜಮೀನಿನಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದರೆ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುವಂತಿಲ್ಲ. ಸಿಎಂ ಸಿದ್ದರಾಮಯ್ಯ ನೀಡಿರುವ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಸೂಚನೆ ನೀಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!