ಡಿಸೆಂಬರ್ ಮೊದಲ ವಾರದಲ್ಲೇ ಬೆಳಗಾವಿ ಚಳಿಗಾಲ ಅಧಿವೇಶನ….?
ಬೆಳಗಾವಿ : ಈ ಬಾರಿಯ ಬೆಳಗಾವಿ ಚಳಿಗಾಲ ಅಧಿವೇಶನ ಯಾವಾಗ ಎಂಬ ಚರ್ಚೆ ಮಧ್ಯೆಯೇ, ಸರ್ಕಾರ ಡಿಸೆಂಬರ್ ಮೊದಲ ವಾರದಲ್ಲೇ ಅಧಿವೇಶನ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಸರ್ಕಾರ ಡಿಸೆಂಬರ್ ಎರಡನೇ ವಾರದಿಂದ ಅಧಿವೇಶನ ನಡೆಸುವ ಚಿಂತನೆ ಹೊಂದಿತ್ತು. ಆದರೆ ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22 ರ ವರೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಯುವ ಕಾರಣಕ್ಕೆ ಅಧಿವೇಶನ ದಿನಾಂಕ ಮೊದಲ ವಾರಕ್ಕೆ ಶಿಪ್ಟ್ ಆಗುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಮಂಡ್ಯ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನಪ್ರತಿನಿಧಿಗಳು ಸಾಹಿತ್ಯ ಸಮ್ಮೇಳನ ಹಿನ್ನಲೆಯಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ಡಿಸೆಂಬರ್ ಮೊದಲ ವಾರದಲ್ಲೇ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.


