ಬೈಲಹೊಂಗಲ : ಮನೆಯಲ್ಲಿ ನೀರು ಕಾಯಿಸಲು ವಾಟರ್ ಹೀಟರ್ ಹಚ್ಚುವಾಗ ಕರೆಂಟ್ ಶಾಕ್ ತಗುಲಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಸಮೀಪದ ಹೊಸೂರ ಗ್ರಾಮದಲ್ಲಿ ಜರುಗಿದೆ.

ಮೃತಳನ್ನು ರೇಖಾ ರುದ್ರಪ್ಪ ಹುಡೇದ (52) ಎಂದು ಗುರುತಿಸಲಾಗಿದೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.