Select Page

Advertisement

ಮಾಜಿ ಶಾಸಕರ ಸಹೋದರನ ಶವ ಪತ್ತೆ ; ಆತ್ಮಹತ್ಯೆಗೆ ಕಾರಣವಾಯ್ತಾ ಆ ಘಟನೆ…?

ಮಾಜಿ ಶಾಸಕರ ಸಹೋದರನ ಶವ ಪತ್ತೆ ; ಆತ್ಮಹತ್ಯೆಗೆ ಕಾರಣವಾಯ್ತಾ ಆ ಘಟನೆ…?

ಮಂಗಳವಾರ : ಕಾಂಗ್ರೆಸ್ ಮಾಜಿ ಶಾಸಕ ಮೊಹಿದ್ದೀನ್ ಬಾವಾ ಸಹೋದರ ಮಮ್ತಾಜ್ ಅವರು ಕೊನೆಗೂ ಬದುಕುಳಿಯುವ ಆಸೆ ಕಮರಿ ಹೋಗಿದೆ.‌ ಕೂಳೂರು ಸೇತುವೆ ಕೆಳಗೆ ಕೆಳಗೆ ಮೃತದೇಹ ಪತ್ತೆಯಾಗಿದೆ.

ಭಾನುವಾರ ನಾಪತ್ತೆ ಆಗಿದ್ದ ಮಮ್ತಾಜ್ ಅಲಿ (Mamtaz Ali)
ಅವರಿಗಾಗಿ ಹುಡುಕಾಟ ಮುಂದುವರಿದಿತ್ತು. ಕೂಳೂರು ಸೇತುವೆ ಬಳಿ ಅವರು ಕಾರು ನಿಲ್ಲಿಸಿ ನಾಪತ್ತೆಯಾಗಿದ್ದರು. ಅನುಮಾನಗೊಂಡ ಪೊಲೀಸರು ಪಲ್ಗುಣಿ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೂ ಮಮ್ತಾಜ್ ಅವರ ಮೃತದೇಹ ಪತ್ತೆಯಾಗಿದೆ.

ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್‌ಮನ್ ಮಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಹಿತ ಆರು ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಇವರ ಸಾವಿಗೆ ಮಹಿಳೆಯೊಬ್ಬರ ಟಾರ್ಚರ್ ಕಾರಣ ಎಂದು ಹೇಳಲಾಗುತ್ತಿದೆ.

ಮಹಿಳೆ ಜತೆ ಅಲಿಯವರಿಗೆ ಅಕ್ರಮ ಸಂಬಂಧವಿತ್ತೆಂದು ಅಪಪ್ರಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಡಿ ಆರು ಜನರ ವಿರುದ್ದ ದೂರು ದಾಖಲು ಮಾಡಲಾಗಿದೆ. ರೆಹಮತ್ ಎಂಬ ಮಹಿಳೆ ಮತ್ತು ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಹೆಬ್, ಸೀರಜ್ ಆರೋಪಿಗಳು

Advertisement

Leave a reply

Your email address will not be published. Required fields are marked *

error: Content is protected !!