Select Page

Advertisement

ನಕಲಿ ದೂರು ದಾಖಲಿಸಿ ಅಮಾಯಕರು ಜೈಲಿಗೆ ; ಪಿಎಸ್ಐ ಸೇರಿ ನಾಲ್ವರ ಅಮಾನತು

ನಕಲಿ ದೂರು ದಾಖಲಿಸಿ ಅಮಾಯಕರು ಜೈಲಿಗೆ ; ಪಿಎಸ್ಐ ಸೇರಿ ನಾಲ್ವರ ಅಮಾನತು

ಬೆಂಗಳೂರು : ನಕಲಿ ದೂರು ದಾಖಲಿಸಿ ಅಮಾಯಕರನ್ನು ಜೈಲಿಗಟ್ಟಿದ್ದ ಬೆಂಗಳೂರಿನ ಬನಶಂಕರಿ ಠಾಣೆ ಪಿಎಸ್​ಐ ಸೇರಿದಂತೆ ನಾಲ್ವರ ಪೊಲೀಸರ ಅಮಾನತು ಮಾಡಲಾಗಿದೆ.

ಬನಶಂಕರಿ ಠಾಣೆ ಪಿಎಸ್ಐ ಶ್ರೀಧರ್ ಗುಗ್ರಿ, ಎಎಸ್ಐ ಎಸ್.ಕೆ.ರಾಜು, ಕಾನ್ಸ್​ಟೇಬಲ್​ಗಳಾದ ಸತೀಶ್ ಬಗಲಿ, ತಿಮ್ಮಪ್ಪ ಪೂಜಾರ ಅಮಾನತುಗೊಳಿಸಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ.

ಸುಳ್ಳು ಮಾಹಿತಿ ನೀಡಿ ದೂರು ದಾಖಲಿಸಿದ್ದ ಬೆಂಗಳೂರಿನ ಸುಬ್ರಹ್ಮಣ್ಯಪುರ ಎಸಿಪಿ ಸ್ಕ್ವಾಡ್​ನಿಂದ ರಾಜನ್, ಚೈತ್ರಾ ಕೂಡ ಬಂಧನ ಮಾಡಲಾಗಿದೆ. ಕದಿರೇನಹಳ್ಳಿಯ ಇಬ್ಬರ ವಿರುದ್ಧ ಸುಳ್ಳು ಎನ್​ಡಿಪಿಎಸ್​ ಕೇಸ್ ದಾಖಲಿಸಿ ಜೈಲು ಕಳುಹಿಸಲಾಗಿತ್ತು. ತನಿಖೆ ನಡೆಸಿ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟಿದ್ದ ಪೊಲೀಸರ ಸಸ್ಪೆಂಡ್ ಮಾಡಲಾಗಿದೆ.

ಸುಳ್ಳು ಮಾಹಿತಿ ನೀಡಿ ದೂರು ದಾಖಲಿಸಿದ್ದ ಬೆಂಗಳೂರಿನ ಸುಬ್ರಹ್ಮಣ್ಯಪುರ ಎಸಿಪಿ ಸ್ಕ್ವಾಡ್​ನಿಂದ ರಾಜನ್, ಚೈತ್ರಾ ಕೂಡ ಬಂಧನ ಮಾಡಲಾಗಿದೆ. ಕದಿರೇನಹಳ್ಳಿಯ ಇಬ್ಬರ ವಿರುದ್ಧ ಸುಳ್ಳು ಎನ್​ಡಿಪಿಎಸ್​ ಕೇಸ್ ದಾಖಲಿಸಿ ಜೈಲು ಕಳುಹಿಸಲಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!