Select Page

Advertisement

ಹುಬ್ಬಳ್ಳಿ : ಸಿಲಿಂಡರ್ ‌ಸ್ಪೋಟ ನಾಲ್ವರಿಗೆ ಗಂಭೀರ ಗಾಯ

ಹುಬ್ಬಳ್ಳಿ : ಸಿಲಿಂಡರ್ ‌ಸ್ಪೋಟ ನಾಲ್ವರಿಗೆ ಗಂಭೀರ ಗಾಯ

ಕುಂದಗೋಳ : ಗೃಹ ಬಳಕೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ
ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ನಡೆದಿದೆ.

ಮನೆಯ ಯಜಮಾನ ಸಿದ್ದಲಿಂಗಯ್ಯ ಹಿರೆಮಠ(43), ಪತ್ನಿ ವಿಶಾಲಾ ಹಿರೆಮಠ (35), ಪುತ್ರ ಶ್ರಿಪಾದಯ್ಯ ಹಿರೆಮಠ 17, ಸಿದ್ದಲಿಂಗಯ್ಯ ಅವರ ತಮ್ಮನ ಹೆಂಡತಿ ನಿರ್ಮಲಾ ಹಿರೆಮಠಗೆ ಗಂಭೀರ ಗಾಯಗಳಾಗಿದ್ದು, ಗಾಯಗಳುಗಳನ್ನು‌ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರವಿವಾರ ಬೆಳಗ್ಗೆ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡಿದೆ.‌ ಪರಿಣಾಮವಾಗಿ ಅಡುಗೆ ಮನೆಯಲ್ಲಿದ್ದ ಇಬ್ಬರು ಸೇರಿ ಬಾತ್ ರೂಮ್‌ನಲ್ಲಿ ಇದ್ದವರಿಗೆ ಗಂಭೀರ ಗಾಯಗಳಾಗಿವೆ.

ಸಿಲಿಂಡರ್ ಸ್ಪೋಟದದಿಂದಾಗಿ ಮನೆಗೂ ಹಾನಿಯಾಗಿದೆ.
ಗಾಯಾಳುಗಳಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ‌ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!