Select Page

Advertisement

ಮಾಜಿ ಸಿಎಂ ಅಶ್ಲೀಲ ವೀಡಿಯೋ ಸದ್ದು ; ಬಯಲಾಗುತ್ತಾ ರಾಜ್ಯದ ಇನ್ನೊಬ್ಬ ಕಾಮುಕನ ಮುಖವಾಡ…?

ಮಾಜಿ ಸಿಎಂ ಅಶ್ಲೀಲ ವೀಡಿಯೋ ಸದ್ದು ; ಬಯಲಾಗುತ್ತಾ ರಾಜ್ಯದ ಇನ್ನೊಬ್ಬ ಕಾಮುಕನ ಮುಖವಾಡ…?

ಬೆಂಗಳೂರು : ರಾಜ್ಯದ ಮಾಜಿ ಸಿಎಂ ಅವರದ್ದೇ ಎನ್ನಲಾದ ಅಶ್ಲೀಲ ವೀಡಿಯೋ ಕುರಿತಾದ ಚರ್ಚೆ ಜೋರಾಗಿದೆ. ಆಂದ್ರದ ಚಿತ್ರನಟಿಯರ ಜೊತೆ ಕಳೆದ ಖಾಸಗಿ ಕ್ಷಣಗಳ ವೀಡಿಯೋ ತುಂಬಾ ಸದ್ದು ಮಾಡುತ್ತಿದೆ.

ಹೌದು ಕರ್ನಾಟದಕ ಮಾಜಿ ಮುಖ್ಯಮಂತ್ರಿ ಒಬ್ಬರು ಅನೇಕ ಹುಡುಗಿಯರ ಜೊತೆ ಕಳೆದ ಖಾಸಗಿ ಕ್ಷಣಗಳ ವೀಡಿಯೋ ಸಧ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದೆ. ಆ ಸಿಎಂ ಚಿಕ್ಕಬಳ್ಳಾಪುರದ ತನ್ನ ಆಪ್ತನ ಸಹಾಯದಿಂದ ಈ ರೀತಿಯ ಹತ್ತಾರು ಯುವತಿಯರ ಜೊತೆಗೆ ಕಾಮಕ್ರೀಡೆ ಆಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆ ಸಿಎಂ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ್ದು ತಾವು ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ಎಂಬ ಮಾತು ಕೇಳಿಬರುತ್ತಿದ್ದು, ಇದರಿಂದ ಅಧಿಕಾರ ದುರ್ಬಳಕೆ ಆಗಿದೆಯಾ ಎಂಬ ಮಾತು ಜೋರಾಗಿವೆ. ಜೊತೆಗೆ ಈ ಅಶ್ಲೀಲ ವೀಡಿಯೋ ಕೂಡಾ ಕೆಲವರ ಬಳಿ ಇದೆ ಎಂದು ಹೆಳಲಾಗುತ್ತಿದೆ.

ಇನ್ನೂ ಈ ವೀಡಿಯೋ ವಿಚಾರವಾಗಿ ವಕೀಲ ಜಗದೀಶ್ ಎಂಬುವವರು ಸುಪ್ರೀಂ ಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಕೀಲ ಈ ಕುರಿತು ಮಾಹಿತಿ ನೀಡಿದ್ದು, ಸಿಎಂ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿದ್ದು ಅವರ ಅಧಿಕಾರ ದುರ್ಬಳಕೆ ಆಗಿರುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾರೆ.

ವಕೀಲರು ಹೇಳುವ ಮಾಹಿತಿ ಪ್ರಕರಾ ಈ ಸಿಎಂ ಜೊತೆ ಒಬ್ಬ ಅಧಿಕಾರಿ ಕೂಡಾ ಇದ್ದರು. ಅಕ್ರಮ ಹಣ ಗಳಿಕೆ ಆರೋಪದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಸಿಎಂ ಜೊತೆಗಿನ ಸಂಬಂಧ ಬಳಸಿಕೊಂಡು ಕೋಟ್ಯಾಂತರ ಹಣ ಹೊಡೆದಿದ್ದಾನೆ. ಜೊತೆಗೆ ಚಿಕ್ಕಬಳ್ಳಾಪುರದ ಆ ವ್ಯಕ್ತಿಯ ಜೊತೆಗೂಡಿ ಈ ಕೃತ್ಯ ಎಸಗಲು ಸಹಕಾರ ನೀಡಿದ್ದಾನೆ ಎಂದು ಕೇಳಿಬರುತ್ತಿದೆ.

ರೇವಣ್ಣ ಕುಟುಂಬದ ಕಾಮ ಪುರಾಣ ಮುಗಿಯುವ ಹೊತ್ತಲ್ಲೇ ರಾಜ್ಯದ ಇನ್ನೊಬ್ಬ ರಾಜಕಾರಣಿ ಹೆಸರು ಅಶ್ಲೀಲ ವೀಡಿಯೋ ವಿಚಾರವಾಗಿ ಮುನ್ನಲೆಗೆ ಬಂದಿದೆ. ಹತ್ತಾರು ಹುಡುಗಿಯರ ಜೋತೆ ಮಾಜಿ ಸಿಎಂ ಈ ರೀತಿಯ ಕೆಲಸ ಮಾಡಿದ್ದರೆ ಅದು ರಾಜ್ಯದ ಜನತೆಗೆ ಮಾಡಿದ ಅಪಮಾನ.

Advertisement

Leave a reply

Your email address will not be published. Required fields are marked *

error: Content is protected !!