ಪತ್ರಕರ್ತ ರವೀಂದ್ರ ಮುದ್ದಿ ಪುಸ್ತಕ ಬಿಡುಗಡೆ
ಬೆಂಗಳೂರು : ಪತ್ರಕರ್ತ ರವೀಂದ್ರ ಮುದ್ದಿ ಅವರು ಬರೆದ ವರದಾ ತೀರದ ಕಥೆಗಳು ಎನ್ನುವ ಕಥಾ ಸಂಕಲನ ಬಿಡುಗಡೆಯಾಯಿತು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ವೀರಲೋಕದ ಮಹತ್ತರ ಯೋಜನೆ ಉತ್ತರಪರ್ವ ವೇದಿಕೆಯಲ್ಲಿ ರವೀಂದ್ರ ಮುದ್ದಿ
ಅವರು ಬರೆದ ಈ ವರದಾ ತೀರದ ಕಥೆಗಳನ್ನು ಕೃತಿಯನ್ನು ಖ್ಯಾತ ನಿರ್ದೇಶಕ ಬಿ. ಸುರೇಶ್, ಉತ್ತರಪರ್ವದ ಸಂಪಾದಕ ರಾಗಂ ಹಾಗೂ ಕಥೆಗಾರ ಕರ್ಕಿ ಕೃಷ್ಣಮೂರ್ತಿ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಉತ್ತರಪರ್ವ ಮುಖ್ಯ ರೂವಾರಿ ವೀರಲೋಕದ ವೀರಕಪುತ್ರ ಶ್ರೀನಿವಾಸ್ ವೇದಿಕೆಯಲ್ಲಿದ್ದರು.


