ಕಾಗವಾಡ : ಕಾಂಗ್ರೆಸ್ ವಿರುದ್ಧ ರಾಂಗ್ ಆದ ರಾಜು ಕಾಗೆ
ಕಾಗವಾಡ : ರೈತರಿಗೆ ಸರಿಯಾಗಿ ವಿದ್ಯುತ್ ನೀಡುವಲ್ಲಿ ನಾವು ಅಸಹಾಯಕತೆ ಹೊಂದಿದ್ದೇವೆ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಹೌದು ಹಳ್ಳಿ ಭಾಗದಲ್ಲಿ ರೈತರಿಗೆ ಸರಿಯಾಗಿ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ನಮ್ಮಿಂದ ಹಿನ್ನಡೆ ಆಗಿದ್ದು ನಿಜ. ಈ ಕುರಿತು ಅಧಿಕಾರಿಗಳು ಕೆಲಸ ಮಾಡಬೇಕು. ಶಾಸಕಾಂಗದ ಪಾತ್ರವೂ ಇರುತ್ತದೆ ಎಂದು ಕಾಗೆ ಹೇಳಿದರು.
ಸಧ್ಯ ಶಾಸಕ ಕಾಗೆ ನೀಡಿರುವ ಹೇಳಿಕೆ ಒಂದುಕಡೆ ಕಾಂಗ್ರೆಸ್ ಒಳಗೆ ಮತ್ತೊಂದು ರೀತಿಯಲ್ಲಿ ಬಿಂಬಿತವಾಗುತ್ತಿದೆ. ರೈತರ ಪರವಾಗಿ ನಾನು ಇದ್ದೇನೆ ಎಂಬ ಹೇಳಿಕೆ ನೀಡಿರುವ ಇವರು ಸರ್ಕಾರದ ಕಾರ್ಯವೈಖರಿ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.


