Select Page

ಡಿಸಿಗೆ ಭೇಟಿಯಾದ ಡಾ. ಮಹಾಂತೇಶ ಶಾಸ್ತ್ರೀಗಳು

ಡಿಸಿಗೆ ಭೇಟಿಯಾದ ಡಾ. ಮಹಾಂತೇಶ ಶಾಸ್ತ್ರೀಗಳು

ಬೆಳಗಾವಿ : ಮುಜರಾಯಿ ಇಲಾಖೆ ಧಾರ್ಮಿಕ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬೈಲಹೊಂಗಲ ಪಟ್ಟಣದ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಮಂಗಳವಾರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಭೇಟಿಯಾದರು.

ಮುಜರಾಯಿ ಇಲಾಖೆಯ ಧಾರ್ಮಿಕ ಪರಿಷತ್ತಿನ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದ ಡಾ. ಮಹಾಂತೇಶ ಅವರು, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ದೇವಸ್ಥಾನದ ಅಭಿವೃದ್ಧಿಗೆ ತಮ್ಮ ಸಹಕಾರ ಸದಾ ಇರಬೇಕೆಂದು ಕೇಳಿದರು.

ಇದಕ್ಕೆ ಸ್ಪಂದಿಸಿದ ಡಿಸಿ ನಿತೇಶ್ ಪಾಟೀಲ, ಮುಜರಾಯಿ ಇಲಾಖೆ ದೊಡ್ಡ ಇಲಾಖೆ ಪ್ರತಿಯೊಂದು ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ಜಿಲ್ಲಾಡಳಿತದ್ದು ಇರುತ್ತದೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!