
Laxman Savadi – ಸ್ನೇಹಿತನ ಬೆನ್ನಿಗೆ ನಿಂತರಾ ಅಥಣಿ ಸಾಹುಕಾರ್ ; ಕತ್ತಿ ರಾಜೀನಾಮೆ ಕಿಡಿ

ಅಥಣಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ ವಿಚಾರಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಹತ್ವದ ಹೇಳಿಕೆ ನೀಡುವ ಮೂಲಕ ಸ್ನೇಹಿತನ ಬೆನ್ನಿಗೆ ನಿಲ್ಲುವ ಸುಳಿವು ನೀಡಿದ್ದಾರೆ.
ಹೌದು ರಮೇಶ್ ಕತ್ತಿ ದಿಢೀರ್ ರಾಜೀನಾಮೆಯಿಂದ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತು ಜೋರಾಗಿವೆ. ಈ ಸಂದರ್ಭದಲ್ಲಿ ರಮೇಶ್ ಕತ್ತಿ ಒಬ್ಬಂಟಿಯಾದರಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪರೋಕ್ಷವಾಗಿ ಕತ್ತಿ ಬಬಲಕ್ಕೆ ನಿಂತಿದ್ದಾರೆ.
ಈ ಕುರಿತು ಅಥಣಿಯಲ್ಲಿ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ ಸವದಿ. ಅಧಿಕಾರ ಯಾರಿಗೂ ಶಾಶ್ವತ ಇಲ್ಲ. ರಾಜೀನಾಮೆ ವಿಚಾರವಾಗಿ ರಮೇಶ್ ಕತ್ತಿ ಜೊತೆ ಮಾತನಾಡುತ್ರೇನೆ. ಆ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ರಾಜೀನಾಮೆ ಕುರಿತು ನಾನು ಊರಿನಲ್ಲಿ ಇರದ ಕಾರಣ ಏನನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಜಿಲ್ಲೆಯ ಮುಖಂಡರ ಜೊತೆ ಚರ್ಚೆ ನಡೆಸುತ್ತೇನೆ. ಹೊಸ ಅಧ್ಯಕ್ಷರ ನೇಮಕದ ಕುರಿತು ಈಗಲೇ ಏನು ಹೇಳುವುದಿಲ್ಲ ಎಂದು ಸವದಿ ತಮ್ಮ ಅಭಿಪ್ರಾಯ ಹೊರಹಾಕಿದರು.