ಒಂದೇ ಕಾರಲ್ಲಿ ದೆಹಲಿಗೆ ಹೊರಟ ಖರ್ಗೆ, ಡಿಕೆಶಿ ; ಕುತೂಹಲ ಘಟ್ಟಕ್ಕೆ ಸಿಎಂ ಬದಲಾವಣೆ ವಿಷಯ..!

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಜೋರಾದ ಸಿಎಂ ಬದಲಾವಣೆ ವಿಚಾರ ಸಧ್ಯ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಂದೇ ಕಾರಲ್ಲಿ ದೆಹಲಿ ಭೇಟಿ ಕೈಗೊಂಡಿದ್ದಾರೆ.
ಬೆಂಗಳೂರಿನಿಂದ ಹೊರಟ ಮಲ್ಲಿಕಾರ್ಜುನ ಖರ್ಗೆ ಕಾರಿನಲ್ಲಿ ಡಿಕೆಶಿ ಏರ್ಪೋರ್ಟ್ ವರೆಗೂ ತೆರಳಿದ್ದು ಇಬ್ಬರೂ ನಾಯಕರು ದೆಹಲಿಗೆ ಹೋಗಿದ್ದಾರೆ. ಈ ಮಧ್ಯೆ ನಡೆದ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಈಗಾಗಲೇ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರಿವೆ ಎಂದು ಸಿಎಂ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ದಾಳ ಉರುಳಿಸುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲದೆ ಖರ್ಗೆ ಹಾಗೂ ಡಿಕೆಶಿ ನಡುವಿನ ಗುಪ್ತ ಸಭೆಯ ಕುರಿತು ಸಾಕಷ್ಟು ಕುತೂಹಲ ಮೂಡುತ್ತಿವೆ.


