ಮಕ್ಕಳಿದ್ದರು ಅನಾಥವಾದ ಶವ ; ತಂದೆಯ ಮೃತದೇಹ ಬೀಸಾಕಿ ಎಂದ ಮಗಳು..!
ಬೆಳಗಾವಿ : ಭವಿಷ್ಯದಲ್ಲಿ ಆಸರೆಯಾಗಲೆಂದು ಮಕ್ಕಳನ್ನು ಸಾಕಿ, ಸಲುಹಿ ದೊಡ್ಡವರನ್ನಾಗಿ ಮಾಡಿದಮೇಲೆ ಅದೇ ಮಕ್ಕಳು ಸಾಯುವಾಗ ಹನಿ ನೀರು ಹಾಕುವುದಿರಲಿ ಕೊನೆ ಪಕ್ಷ ಮೃತದೇಹ ಮಣ್ಣು ಮಾಡುವುದಕ್ಕೂ ಹಿಂದೇಟು ಹಾಕುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ವಿದೇಶದಲ್ಲಿರುವ ಮಕ್ಕಳು ಹೆತ್ತ ತಂದೆಯ ಅಂತಿಮ ಸಂಸ್ಕಾರ ನೆರವೇರಿಸದೇ ಶವ ಅನಾಥವಾದ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ರಾಷ್ಟ್ರೀಕೃತ ಬ್ಯಾಂಕ್ ಒಂದರ ನಿವೃತ್ತ ಮ್ಯಾನೇಜರ್ ಮೂಲಚಂದ್ರ ಶರ್ಮಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಗಡಿ ಭಾಗ ಚಿಕ್ಕೋಡಿಯಲ್ಲಿ ಚಿಕಿತ್ಸೆ ಪಡೆಯಲು ಬಂದಾಗ ಅಸ್ವಸ್ಥರಾಗಿ ತೀರಿಕೊಂಡಿದ್ದಾರೆ. ಇನ್ನೂ ವಿದೇಶದಲ್ಲಿರುವ ಇವರ ಇಬ್ಬರು ಮಕ್ಕಳು ತಂದೆಯ ಅಂತಿಮ ಸಂಸ್ಕಾರಕ್ಕೆ ನೆರವಾಗದೆ ಇದ್ದಾಗ ಪೊಲೀಸ್ ಅಧಿಕಾರಿಗಳೇ ಶವಕ್ಕೆ ಮುಕ್ತಿ ಕೊಟ್ಟ ಘಟನೆ ಜರುಗಿದೆ.
ನಿವೃತ್ತ ಮ್ಯಾನೇಜರ್ ಮೂಲಚಂದ್ರ ಶರ್ಮಾ ಅವರಿಗೆ ಇಬ್ಬರು ಮಕ್ಕಳ ಪೈಕಿ ಮಗಳು ಕೆನಡಾದಲ್ಲಿ ವಾಸವಿದ್ದರೆ ಓರ್ವ ಮಗ ದಕ್ಷಿಣ ಆಫ್ರಿಕಾದಲ್ಲಿ ವಾಸವಿದ್ದಾನೆ. ಇಬ್ಬರು ಉತ್ತಮ ಹುದ್ದೆಯಲ್ಲಿದ್ದರು ಇವರ ತಂದೆಯು ಅಂತಿಮ ದಿನಗಳನ್ನು ಒಂಟಿಯಾಗಿ ಕಳೆಯುವಂತಾಗಿದೆ. ಇಬ್ಬರು ಮಕ್ಕಳಿದ್ದರೂ ನಿವೃತ್ತ ಬ್ಯಾಂಕ್ ಮ್ಯಾನೆಂಜರ್ ಅವರ ಶವ ಅನಾಘವಾಗಿದ್ದು ಕೆಲವರ ಕ್ರೂರ ಮನಸ್ಸಿಗೆ ಹಿಡಿದ ಕೈಗನ್ನಡಿ.
*****************
ಘಟನೆ ಹಿನ್ನೆಲೆ : ಮಹಾರಾಷ್ಟ್ರದ ಪುಣೆ ನಗರ ನಿವಾಸಿ ಮೂಲಚಂದ್ರ ಶರ್ಮಾ ಪಾರ್ಶ್ವವಾಯು ಗೆ ತುತ್ತಾಗಿದ್ದರು. ಇವರನ್ನು ವ್ಯಕ್ತಯೋರ್ವ ಚಿಕಿತ್ಸೆಗೆಂದು ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಗೆ ತಂದು ಬಿಟ್ಟಿದ್ದು. ಕೆಲ ದಿಮಗಳಿಂದ ಲಾಡ್ಜ್ ನಲ್ಲಿದ್ದ ಮೂಲಚಂದ್ರ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಮೂಲಚಂದ್ರ ಶರ್ಮಾ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಾಗ ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸುದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ತನ್ನ ಕುಟುಂಬದ ಮಾಹಿತಿ ಹಾಗೂ ಹಿನ್ನೆಲೆ ಹೇಲೀಕೊಂಡಿದ್ದು ಮಕ್ಕಳಿಗೆ ಮಾಹಿತಿ ನೀಡಿದ್ದರು ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮೂಲಚಂದ್ರ ಶನಿವಾರ ಮೃತಪಟ್ಟಿದ್ದು ಪೊಲೀಸ್ ಇಲಾಖೆ ಸಿಬ್ಬಂದಿಗಳೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
*********************
ತಂದೆಯ ಮೃತದೇಹ ಬೀಸಾಕಿ ಎಂದ ಮಗಳು :
ಅನಾರೋಗ್ಯದಿಂದ ಬಳಲುತ್ತಿದ್ದ ಮೂಲಚಂದ್ರ ಶರ್ಮಾ ಅವರ ಇಬ್ಬರು ಮಕ್ಕಳಿಗೆ ಮಾಹಿತಿ ನೀಡಿದರು ಯಾವುದೇ ಸ್ಪಂದನೆ ದೊರೆತಿಲ್ಲ. ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಮೃತರ ಮಗಳನ್ನೂ ಕೊನೆಗೂ ಪೊಲೀಸರು ವಾಟ್ಸಪ್ ಕಾಲ್ ಮೂಲಕ ಸಂಪರ್ಕಿಸಿದ್ದ ಸಂದರ್ಭದಲ್ಲಿ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಇಲ್ಲವಾದರೆ ಮೃತದೇಹ ಬೀಸಾಡಿ ಎಂದು ಪಿಎಸ್ಐ ಬಸಗೌಡ ನೇರ್ಲಿ ಅವರಿಗೆ ಮಹಿಳೆ ತಿಸಿಸಿದ್ದಾರೆ ಎಂದು ಹೇಳಿದ್ದಾರೆ.


