ಅಥಣಿ – ಪ್ರವಾಹದಲ್ಲಿ ಅಪ್ಪನ ಕಳೆದುಕೊಂಡ ಮಕ್ಕಳ ಗೋಳಾಟ ; ಕಣ್ಣೀರು ಒರೆಸುವುದಾ ಜಿಲ್ಲಾಡಳಿತ..?
ಬೆಳಗಾವಿ : ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ನೀರು ಪಾಲಾದ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಬಾಳು ಚೌಹಾನ್ ಮಕ್ಕಳ ಗೋಳು ಕೇಳುವವರಿಲ್ಲ. ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಪ್ರವಾಹದ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡರೂ ಇತ್ತ ಅಧಿಕಾರಿಗಳು ಮಾತ್ರ ನಿದ್ರೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಹೌದು ಪ್ರವಾಹ ಹಿನ್ನಲೆಯಲ್ಲಿ ಮನೆ ತೊರೆದು ಹದಿನೈದು ದಿನಗಳ ಹಿಂದೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದ ಬಾಳು ಚೌಹಾನ್ ಕುಟುಂಬ ಸಂಬಂಧಿಕರ ಮನೆಯಲ್ಲಿ ವಾಸವಿತ್ತು. ಇನ್ನೇನು ಪ್ರವಾಹ ಕಡಿಮೆಯಾಗುತ್ತಿದೆ, ಮನೆಯಲ್ಲಿದ್ದ ಕಾಳು, ಕಡಿ ಹೇಗಿವೆ ಎಂದು ನೋಡಲು ಬಂದಿದ್ದ ವ್ಯಕ್ತಿ ನೀರುಪಾಲಾಗಿದ್ದರು.
ಬಾಳು ಚವ್ಹಾಣ (61) ನೀರುಪಾಲದ ದುರ್ದೈವಿಯಾಗಿದ್ದಾನೆ. ನೆರೆ ಪ್ರವಾಹದಿಂದ ಬೇಸತ್ತ ಬಾಳು ಕಳೆದ 12 ದಿನಗಳಿಂದ ಮನೆಯಲ್ಲಿದ್ದ ಸಾಮಾನುಗಳನ್ನ ಅಟ್ಟದ ಮೇಲೆ ಇಟ್ಟು ಕುಟುಂಬ ಸಮೇತ ಮಹಾರಾಷ್ಟ್ರ ದ ಕವಟೇಮಹಾಕಾoಳದ ಸಂಬಂದಿಗಳ ಮನೆಯಲ್ಲಿ ವಾಸವಾಗಿದ್ದರು.
ಬುಧವಾರ ಸಂಜೆ ಮನೆಯಲ್ಲಿದ್ದ ಜೋಳ ಹಾಗೂ ಇತರೆ ಸಾಮಾನು ನೋಡಲು ಬಂದ ವ್ಯಕ್ತಿ ತಮ್ಮನ ಮಗನೊಂದಿಗೆ ಕೃಷ್ಣ ನದಿ ಒತ್ತು ನೀರಿನ ಪ್ರವಾಹದಲ್ಲಿ ಇಳಿದಿದ್ದಾರೆ. ತಮ್ಮನ ಮಗ ಮುಂದೆ ಸಾಗಿದ್ದು, ಹಿಂತಿರುಗಿ ನೋಡಿದಾಗ ಚಿಕ್ಕಪ್ಪನಾದ ಬಾಳು ಚವ್ಹಾಣ ಕಾಣಿಸದೆ ಹೋದಾಗ ಗಾಬರಿಗೊಂಡು ಸ್ಥಳೀಯರ ಸಹಾಯ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ಹುಡುಕಾಟ ಶುರು ಮಾಡಿದ್ದಾಗ ಮೃತದೇಹ ಪತ್ತೆಯಾಗಿತ್ತು.
ಸಧ್ಯ ತಂದೆಯನ್ನು ಕಳೆದುಕೊಂಡು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿ ಮೃತಪಟ್ಟ ಹಿನ್ನಲೆಯಲ್ಲಿ ಬದುಕು ನಡೆಸುವುದೇ ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಪರಿಹಾರ ನೀಡಿ ಕುಟುಂಬದ ಕಣ್ಣೀರು ಒರಸಬೇಕು ಎಂಬುದು ಜನರ ಆಗ್ರಹವಾಗಿದೆ.