Select Page

Advertisement

ಮುಂದುವರಿದ ಮಳೆ ಅಬ್ಬರ ; ಸ್ಮಶಾನವೇ ಜಲಾವೃತ

ಮುಂದುವರಿದ ಮಳೆ ಅಬ್ಬರ ; ಸ್ಮಶಾನವೇ ಜಲಾವೃತ

ಚಿಕ್ಕೋಡಿ : ಮಹಾರಾಷ್ಟ್ರ ಘಟ್ಟಪ್ರದೇಶದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸಧ್ಯ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮ, ದೂದಗಂಗಾ ನದಿ ನೀರಿನ ಮಟ್ಟ ಹೆಚ್ಚಾದಂತೆ ಅಪಾಯಕ್ಕೆ ಸಿಲುಕುತ್ತದೆ. ಸಧ್ಯ ಕಾರದಗಾ ಗ್ರಾಮದ ಜನ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

ಕಾರದಗಾ ಗ್ರಾಮದ ಸ್ಮಶಾನಕ್ಕೆ ಜಲದಿಗ್ಭಂದನ ಉಂಟಾಗಿದೆ. ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸ್ಪಷ್ಟ ನಿದರ್ಶನ ನೀಡಿದ್ದು ಪ್ರವಾಹ ಎದುರಿಸಲು ಸಿದ್ಧತೆ ಕೈಗೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!