Select Page

Advertisement

ಸಿಡಿಲಿಗೆ ಇಬ್ಬರು ರೈತರು ಸೇರಿ 12 ಕುರಿ ಸಾವು

ಸಿಡಿಲಿಗೆ ಇಬ್ಬರು ರೈತರು ಸೇರಿ 12 ಕುರಿ ಸಾವು

ಚಿಕ್ಕೋಡಿ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆ ಜೊತೆಗೆ ಸಿಡಿಲು ಹೊಡೆದು ಇಬ್ಬರು ರೈತರು 12 ಕುರಿಗಳು ಸಾವು ಸಂಭವಿಸಿ ಆರು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಹೊರವಲಯದ ಶೋಭಾ ಕೃಷ್ಣ ಕುಲಗೋಡೆ (೪೫) ಮೃತ ರೈತ ಮಹಿಳೆ ಮೃತ ಪಟ್ಟಿದ್ದಾರೆ. ಜೊತೆಗೆ ಮಲ್ಲಪ್ಪ ಶಂಕರ್ ಮೇತ್ರಿ ಹಾಗೂ ಭಾರತಿ ಕೆಂಪಣ್ಣ ಕಮತೆ, ಮತ್ತೆ ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ ಇವರನ್ನು ರಾಯಭಾಗ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ‌.

ಎಲ್ಲರೂ ಸಂಜೆ ಹೊತ್ತಿನಲ್ಲಿ ಗದ್ದೆಯಲ್ಲಿ ಕಬ್ಬು ನಾಟಿ ಮಾಡುವ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಹೊಡೆದು ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ರಾಯಭಾಗ ಪೊಲೀಸ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತೋಂದು ಕಡೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಹೊಡೆದು ಗುರು ಪುಂಡಲಿಕ (35) ರೈತ ಮೃತಪಟ್ಟಿದ್ದಾರೆ. ಇವರ ಜೊತೆಗೆ ಇಬ್ಬರಿಗೆ ಗಾಯಗೊಂಡಿದ್ದಾರೆ ಇವರನ್ನು ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಏಕಾಏಕಿ ಸಿಡಿಲು ಅಪ್ಪಳಿಸಿ ಈ ಘಟನೆ ಸಂಭವಿಸಿದೆ.

ಹಾಗೂ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲು ಹೊಡೆದು 12 ಕುರಿಗಳು ಸಾವು ಸಂಭವಿಸಿದೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!