Select Page

Advertisement

ಲೋಕಸಭಾ ಚುನಾವಣೆ ; ಚಿಕ್ಕೋಡಿ ಸೇರಿ ಆರು ಕ್ಷೇತ್ರದ ಟಿಕೆಟ್ ಗೆ ಅರ್ಜಿ ಆಹ್ವಾನ…!

ಲೋಕಸಭಾ ಚುನಾವಣೆ ; ಚಿಕ್ಕೋಡಿ ಸೇರಿ ಆರು ಕ್ಷೇತ್ರದ ಟಿಕೆಟ್ ಗೆ ಅರ್ಜಿ ಆಹ್ವಾನ…!

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಜಾಕೀಯದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಇದಕ್ಕಾಗಿ ಚಿಕ್ಕೋಡಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಆರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.

ಚಿಕ್ಕೋಡಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರಗಳ ಆಸಕ್ತ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರಜಾಕೀಯ ಸಂಸ್ಥಾಪಕ, ನಟ ಉಪೇಂದ್ರ, ಆಸಕ್ತ ಆಕಾಂಕ್ಷಿಗಳು ತಮ್ಮ ಎಲ್ಲಾ ಮಾಹಿತಿಗಳೊಂದಿಗೆ ಈ ಕೂಡಲೇ http://prajaakeeya.org ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ 5 ಕೊನೆಯ ದಿನ ಎಂದಿದ್ದಾರೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಏಪ್ರಿಲ್ 7 ರಂದು ಪಕ್ಷದ ವತಿಯಿಂದ ಬಿ ಫಾರಂ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!