ಸುಸ್ಥಿರ ತಾಜ್ಯ ನಿರ್ವಹಣೆ ನಮ್ಮ ಜವಾಬ್ದಾರಿ – ಪ್ರೊ. ವಿದ್ಯಾಶಂಕರ್ ಎಸ್
ಬೆಳಗಾವಿ : ಸುಸ್ಥಿರ ತ್ಯಾಜ್ಯ ನಿರ್ವಹಣೆ ಯೋಜನೆ ಹಾಗೂ ಮಾಲಿನ್ಯ ರಹಿತ ಪರಿಸರವವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಕೈಗಾರಿಕಾ ತ್ಯಾಜಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪರಿಸರ ಸಂರಕ್ಷಣೆಗೆ ಮೊದಲ ಆಧ್ಯತೆ ನೀಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆವರಣದಲ್ಲಿ ಎರಡು ದಿನಗಳ ವರೆಗೆ ನಡೆದ ಅಪಾಯಕಾರಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು.
ಆಧುನಿಕತೆ ಬೆಳೆದಂತೆ ಕೈಗಾರಿಕಾ ಕ್ರಾಂತಿ ವೇಗವಾಗಿ ಸಾಗಿದೆ. ಕೈಗಾರಿಕಾ ತ್ಯಾಜ್ಯ ವಸ್ತುಗಳು ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.
ನಮ್ಮ ಮುಂದಿನ ಯುವ ಪೀಳಿಗೆಗೆ ಗುಣಮಟ್ಟದ ಪರಿಸರ ಸಿಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿಟಿಯು ಆವರಣದಲ್ಲಿ ಎರಡು ದಿನಗಳವರೆಗೆ ನಡೆಸ ಸಮ್ಮೇಳನದ ಅತ್ಯಂತ ಅವಶ್ಯಕವಾಗಿ. ಪರಿಸರ ಜಾಗೃತಿ ಕುರಿತು ಪ್ರತಿಯೊಬ್ಬರೂ ಜವಾಬ್ದಾರಿ ಹೊಂದಿರಬೇಕೆಂದು ಕುಲಪತಿ ಪ್ರೊ. ವಿದ್ಯಾಶಂಕರ ಎಸ್ ಸಲಹೆ ನೀಡಿದರು.
ಹಿರಿಯ ವಿಜ್ಞಾನಿ ಡಾ. ವಿಶ್ವನಾಥ್ ರಾಂಪುರ್ ಮಾತನಾಡಿ.
ಕೈಗಾರಿಕೆಗಳಿಂದ ಅಪಾಯಕಾರಿ ತ್ಯಾಜ್ಯಗಳು ಪರಿಸರದಲ್ಲಿ ಸೇರ್ಪಡೆಗೊಳ್ಳುವುದು ಅಪಾಯದ ಮಟ್ಟ ತಲುಪಿದೆ. ಇದರ ನಿರ್ವಹಣೆ ದೊಡ್ಡ ಸವಾಲಾಗಿದ್ದು, ಈ ಕುರಿತು ಸಮಾಜಕ್ಕೆ ತಿಳಿಸುವುದರ ಜೊತೆಗೆ ಸಂಶೋಧನೆಗಳ ಅವಶ್ಯಕತೆ ಇದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ. ಬಿ. ಶಿವಲಿಂಗಯ್ಯ ಮಾತನಾಡಿ. ಅಭಿವೃದ್ಧಿ ಹಾಗೂ ಮನುಷ್ಯನ ಅತಿಯಾದ ಆಸೆಯಿಂದ ಪ್ರಕೃತಿ ಹಾಳಾಗುತ್ತಿದೆ. ಬೇಡಿಕೆಗಳಿಗೆ ತಕ್ಕಂತೆ ಅಭಿವೃದ್ಧಿ ಹೊಂದುವುದು ತಪ್ಪಲ್ಲ ಆದರೆ ಇದರಿಂದ ದುಷ್ಪರಿಣಾಮ ಬೀರದಂತೆ ಕ್ರಮವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯದ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಬಿಐಟಿ ನಿವೃತ್ತ ಪ್ರಾಂಶುಪಾಲ
ಡಾ. ಬಿ.ಎಸ್. ಜೈಪ್ರಕಾಶ್ ಮಾಹಿತಿ ನೀಡಿದರು.
ವಿಡಿಯು ಕುಲಸಚಿವ ಪ್ರೊ. ಬಿ. ಈ. ರಂಗಸ್ವಾಮಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ವಿಡಿಯು ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಟಿ. ಎನ್. ಶ್ರೀನಿವಾಸ, ಹಣಕಾಸು ಅಧಿಕಾರಿ ಎಮ್. ಎ. ಸಪ್ನ, ಸಿವಿಲ್ ವಿಭಾಗದ ಚೇರ್ ಪರ್ಸನ್ ಡಾ ನಾಗರಾಜ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


