ಬೆಳಗಾವಿ ಲೋಕಸಭೆಗೆ ಭರವಸೆ ನಾಯಕ ಮಹಾಂತೇಶ್ ವಕ್ಕುಂದ
ಬೆಳಗಾವಿ : ಈಗಾಗಲೇ ದೇಶದಾದ್ಯಂತ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಿರತವಾಗಿವೆ. ಈ ನಡುವೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಯುವ ನಾಯಕ ಮಹಾಂತೇಶ್ ವಕ್ಕುಂದ ಅವರನ್ನು ಅಭ್ಯರ್ಥಿ ಮಾಡಬೇಕು ಎಂಬುದು ಜಿಲ್ಲೆಯ ಯುವಜನರ ಒತ್ತಾಸೆಯಾಗಿದೆ.

ಹೌದು ನಿರಂತರವಾಗಿ ಕಳೆದ ಒಂದು ದಶಕದಿಂದ ಬಿಜೆಪಿ ಪಕ್ಷ ಸಂಘಟನೆ ಹಾಗೂ ಸಮಾಜ ಸೇವೆಯಲ್ಲಿ ಮಹಾಂತೇಶ್ ವಕ್ಕುಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಒಂದು ಸ್ವಯಂ ಸೇವಾ ಸಂಘಟನೆ ಕಟ್ಟಿಕೊಂಡು ಸಮಾಜಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ಗರಡಿಯಿಂದ ರಾಜಕೀಯಕ್ಕೆ ಬಂದ ಇವರು ರಾಷ್ಟ್ರೀಯತೆಯನ್ನೇ ಮೂಲ ಮಂತ್ರವಾಗಿಸಿಕೊಂಡಿದ್ದಾರೆ.
ಹೊರ ದೇಶದಲ್ಲಿ ಉದ್ಯೋಗಿಯಾಗಿದ್ದ ಮಹಾಂತೇಶ್ ವಕ್ಕುಂದ ಅವರು ತಾಯಿನಾಡಿನ ಸೇವೆಗಾಗಿ ಕೆಲಸ ಬಿಟ್ಟು ಬಂದವರು. ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಇವರು ಪಕ್ಷದಲ್ಲಿ ಯಾವುದೇ ಹುದ್ದೆ ಬಯಸದೇ ಕೇವಲ ಕೆಲಸವನ್ನೇ ತಮ್ಮ ಧ್ಯೇಯವಾಗಿಸಿಕೊಂಡವರು. ಇದೇ ಕಾರಣಕ್ಕೆ ಯುವಕರ ನೆಚ್ಚಿನ ನಾಯಕರಾಗಿ ಬೆಳೆದು ಬಂದಿದ್ದಾರೆ.
ಪಕ್ಷ ಸಂಘಟನೆ ವಿಷಯಕ್ಕೆ ಬಂದಾಗ ಮಹಾಂತೇಶ್ ವಕ್ಕುಂದ ಯಾವತ್ತೂ ಕೈ ಕಟ್ಟಿ ಕುಳಿತವರಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿ, ಇಲ್ಲದಿರಲಿ ಜನಪರವಾದ ಹೋರಾಟ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಪಕ್ಷದ ಹಿರಿಯರು ಈವರೆಗೂ ಕೊಟ್ಟ ಯಾವುದೇ ಕೆಲಸ ಆಗಲಿ ಶ್ರಮವಹಿಸಿ ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದು ಮತ್ತೊಂದು ವಿಶೇಷ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಇವರನ್ನು ಲೋಕಸಭಾ ಅಭ್ಯರ್ಥಿ ಮಾಡಬೇಕು ಎಂಬುದು ಅನೇಕರ ಆಗ್ರಹವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಭಲ ಲಿಂಗಾಯತ ಸಮುದಾಯದ ಮತಗಳ ಜೊತೆ ಇತರ ವರ್ಗದ ಮತದಾರರು ಈ ಬಾರಿ ಬಿಜೆಪಿಯಿಂದ ಹೊಸ ಮುಖ ಬೇಕು ಎಂಬು ಮನಸ್ಥಿತಿ ಹೊಂದಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿ ಮಹಾಂತೇಶ್ ವಕ್ಕುಂದ ಅವರನ್ನು ಲೋಕಸಭಾ ಅಭ್ಯರ್ಥಿ ಮಾಡಿದರೆ ಪಕ್ಷವನ್ನು ಗೆಲ್ಲಿಸುತ್ತೇವೆ ಎನ್ನುತ್ತಾರೆ ಯುವಕರು.
ಸಮಾಜಸೇವೆಯಲ್ಲಿ ಮಹಾಂತೇಶ್ ವಕ್ಕುಂದ ಅವರದ್ದು ಒಂದು ಹೆಜ್ಜೆ ಮುಂದು : ಕೋವಿಡ್ ಸಂದರ್ಭದಲ್ಲಿ ಇಡೀ ಜಿಲ್ಲೆಯ ಜನ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಮಹಾಂತೇಶ್ ವಕ್ಕುಂದ ಅವರು ಮಾಡಿರುವ ಸೇವಾ ಕಾರ್ಯವನ್ನು ಜನ ಇನ್ನೂ ಮರೆತಿಲ್ಲ. ನಿಗದಿತ ಸಮಯದಲ್ಲಿ ಆರೋಗ್ಯ ಪರಿಕರಗಳನ್ನು ತಮ್ಮ ಸ್ವಂತ ಕರ್ಚಿನಲ್ಲಿ ಜನರಿಗೆ ತಲುಪಿಸಿದವರು.
ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ವಿಷಯದಲ್ಲಿ ಮಹಾಂತೇಶ್ ವಕ್ಕುಂದ ಅವರದ್ದು ಒಂದು ಕೈ ಮುಂದೆ. ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅದೆಷ್ಟೋ ಜನರ ಹೊಟ್ಟೆ ತುಂಬಿಸಿದ ಶ್ರೇಷ್ಠ ಕೆಲಸ ಇವರು ಮಾಡಿದ್ದಾರೆ. ಇನ್ನೂ ಕೃಷ್ಣಾ ನದಿ ಪ್ರವಾಹ ಸೇರಿದಂತೆ ಎಲ್ಲೆಲ್ಲಿ ಜನ ಸಂಕಷ್ಟಕ್ಕೆ ಸಿಲುಕುತ್ತಾರೆ ಅಲ್ಲಿ ಮಹಾಂತೇಶ್ ವಕ್ಕುಂದ ಅವರ ಸಹಾಯ ಹಸ್ತ ಇದ್ದೇ ಇರುತ್ತದೆ.
ರಾಜಕಾರಣ ಯಾವತ್ತೂ ನಿಂತ ನೀರಾಗದೆ ಸದಾಕಾಲವೂ ಹೊಸತನದೊಂದಿಗೆ ಸಾಗಬೇಕು ಎಂಬುದು ಬಿಜೆಪಿ ಯುವ ಮತದಾರರ ಆಗ್ರಹವೂ ಆಗಿದೆ. ಈ ಎಲ್ಲಾ ಕಾರಣಗಳಿಂದ ಮಹಾಂತೇಶ್ ವಕ್ಕುಂದ ಅವರೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಉಪಯುಕ್ತ ಅಭ್ಯರ್ಥಿ ಆಗುತ್ತಾರೆ ಎಂಬ ನಂಬಿಕೆಯಲ್ಲಿ ಜನರಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಬೆಳಗಾವಿ ಬಿಜೆಪಿಯಿಂದ ಯುವ ನಾಯಕ ಮಹಾಂತೇಶ್ ವಕ್ಕುಂದ ಅವರನ್ನು ಬಿಜೆಪಿ ಕಾಣಕ್ಕೆ ಇಳಿಸಿದರೆ ಪಕ್ಷಕ್ಕೆ ಲಾಭ ಜಾಸ್ತಿ ಎನ್ನುತ್ತಾರೆ ಕ್ಷೇತ್ರದ ಮತದಾರರು.


