ಆಕೆಗೂ ಇಬ್ಬರು ಮಕ್ಕಳು…..ಅವನಿಗೂ ಇಬ್ಬರು ಮಕ್ಕಳು….ಆದರೆ ಆಂಟಿ ಕರಿಮಣಿ ಮಾಲೀಕ‌ ನೀ ನಲ್ಲ ಎಂದು ಗಂಡನಿಗೆ ಕೈ ಕೊಟ್ಟಿದ್ದರೆ….ನಿನ್ನ ಕರಿಮಣಿ ಮಾಲಿಕ ನಾನಲ್ಲ ಎಂದು ಈತನೂ ನಾಟಿ ಆಂಟಿ ಜೊತೆ ಪರಾರಿಯಾದ ಘಟನೆ ನಡೆದಿದೆ.

ಬೆಳಗಾವಿ : ಯುವಕನ ಜೊತೆ ವಿವಾಹಿತ ಮಹಿಳೆ ಓಡಿಹೋದ ಕಾರಣಕ್ಕೆ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಯುವಕನ ಮನೆಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ

ಯುವಕನೊಬ್ಬ ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾರಣ ಇಬ್ಬರು ಮನೆ ಬಿಟ್ಟು ಮಂಗಳವಾರ ಓಡಿ ಹೋಗಿದ್ದಾರೆ. ಇಬ್ಬರು ಮಕ್ಕಳನ್ನು ಬಿಟ್ಟು ವಿವಾಹಿತ ಮಹಿಳೆ ಓಡಿ ಹೋಗಿದ್ದಕ್ಕೆ ಆಕ್ರೋಶಗೊಂಡ ಆಕೆಯ ಗಂಡ ಯುವಕ ತಾಯಿ ವಾಸವಿದ್ದ ಮನೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ.‌

ವಿವಾಹಿತ ಮಹಿಳೆಯ ಪತಿ ಸೇರಿದಂತೆ 10 ಕ್ಕೂ ಅಧಿಕ ಜನರಿದ್ದ ಗುಂಪು ಏಕಾಏಕಿ ಮಹಿಳೆ ವಾಸವಿದ್ದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆ ಒಳಗಿನ ವಸ್ತುವನ್ನು ಹಾಳು ಮಾಡಿದ್ದು ಕಲ್ಲೂ ತೂರಾಟ ನಡೆಸಿದ್ದಾರೆ.‌ ಇದರಿಂದ ದಿನಬಳಕೆ ವಸ್ತುಗಳು ಹಾಳಾಗಿದ್ದು ಮಗ ಮಾಡಿದ ತಪ್ಪಿಗೆ ಮಹಿಳೆ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿಕ್ರಿಯೆ ನೀಡಿದ ಸಂತ್ರಸ್ತ ಮಹಿಳೆ, ನನ್ನ ಮಗನ ವಿಚಾರಕ್ಕೆ ಮಂಗಳವಾರ ಸಂಜೆ ಊರಿನ ಹಿರಿಯ ಮುಂದೆ ಸಂಧಾನ ಮಾಡಲಾಗಿತ್ತು. ಆತ ಮಾಡಿರುವ ತಪ್ಪಿಗೆ ಯಾವ ಶಿಕ್ಷೇ ಬೇಕಾದರು ಕೊಡಿ ಎಂದು ಮನವಿ ಮಾಡಿದ್ದೆ.‌ ಆದರೆ ಏಕಾಏಕಿ ಮನೆ ಮೇಲೆ ದಾಳಿ ನಡೆದ ಕಾರಣ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಳು ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ಘಟನೆ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ  10 ಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.