Select Page

Advertisement

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭಿಕ್ಷುಕರು ಕೊಟ್ಟ ಹಣ ಎಷ್ಟು ಗೊತ್ತಾ….?

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭಿಕ್ಷುಕರು ಕೊಟ್ಟ ಹಣ ಎಷ್ಟು ಗೊತ್ತಾ….?

ಅಯೋಧ್ಯೆ : ಇನ್ನೇನು ಕೆಲವೇ ದಿನಗಳಲ್ಲಿ ಶ್ರೀರಾಮಂದಿರ ಉದ್ಘಾಟನೆ ಆಗಲಿದೆ. ಜಗತ್ತಿನ ರಾಮ ಭಕ್ತರು ಸೇರಿ ಕೊಟ್ಟ ದೇಣಿಗೆ ಹಣದಲ್ಲಿ ಭವ್ಯ ಮಂದಿರ ನಿರ್ಮಾಣ ಆಗುತ್ತಿದೆ. ಸರ್ಕಾರದ ಒಂದು ರೂ. ಬಳಸದೆ ಈ ಭವ್ಯ ಮಂದಿರ ನಿರ್ಮಾಣದ ಹಿಂದೆ ದೇಶದ ಜನರ ಪರಿಶ್ರಮ ಇದೆ.

ಪವಿತ್ರ ನಗರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿಗೆ ವಿಶ್ವಾದ್ಯಂತ ಭಕ್ತರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಕಾಶಿ ಮತ್ತು ಪ್ರಯಾಗ್‌ರಾಜ್‌ನ ಭಿಕ್ಷುಕರು ಕೂಡ ದೇವಾಲಯದ ನಿರ್ಮಾಣಕ್ಕೆ  ದೇಣಿಗೆ ನೀಡಿದ್ದಾರೆ. ಈ ಕುರಿತು ಟ್ರಸ್ಟ್ ಮಾಹಿತಿ ನೀಡಿದೆ.

ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ನಿಧಿ ಅಭಿಯಾನದಲ್ಲಿ ಪ್ರಯಾಗರಾಜ್ ಮತ್ತು ಕಾಶಿಯಿಂದ 300ಕ್ಕೂ ಹೆಚ್ಚು ಭಿಕ್ಷುಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಇವರು ಕೂಡಿಟ್ಟ 4 ಲಕ್ಷ ರೂ. ನಿಧಿಯನ್ನು ಟ್ರಸ್ಟ್‌ಗೆ ನೀಡಿದರು. ಇವರಿಗೆ ಶ್ಲಾಘನಾರ್ಥವಾಗಿ ಮುಂಬರುವ ರಾಮಲಲಾ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರನ್ನು ಆಹ್ವಾನಿಸಲಾಗುತ್ತಿದೆ.

ಜ.22ರಂದು ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದ್ದು, ಭಕ್ತರು ಈ ಸಂದರ್ಭವನ್ನು ಬಹಳ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ. ಮೋದಿ ಅವರು ಶನಿವಾರ ಪಟ್ಟಣಕ್ಕೆ ಭೇಟಿ ನೀಡಲಿದ್ದು, ಹೊಸದಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣ ಟರ್ಮಿನಲ್ ಮತ್ತು ರೈಲು ನಿಲ್ದಾಣ ಸೇರಿದಂತೆ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

Advertisement

Leave a reply

Your email address will not be published. Required fields are marked *

error: Content is protected !!