Select Page

Advertisement

ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ; ಸಂಚಲನ ಮೂಡಿಸಿದ ಸವದತ್ತಿ ಶಾಸಕರ ಹೇಳಿಕೆ

ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ; ಸಂಚಲನ ಮೂಡಿಸಿದ ಸವದತ್ತಿ ಶಾಸಕರ ಹೇಳಿಕೆ

ಯರಗಟ್ಟಿ : ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಅಷ್ಟೇ ಸತ್ಯ ಎಂದು ಸವದತ್ತಿ ಶಾಸಕ ವಿಶ್ವಾಸ್ ವೈದ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಗಡಿ ಭಾಗದಲ್ಲಿ ಪಕ್ಷಾತೀತ ನಾಯಕ ಒಬ್ಬ ಸಿಎಂ ಆಗಬೇಕು ಎಂಬ ಮಾತು ಹೇಳುತ್ತಿದ್ದಾರೆ. ಅದರಂತೆ ಪೂರ್ವದಲ್ಲಿ ಸೂರ್ಯ‌ ಹುಟ್ಟುವುದು ಎಷ್ಟು ಸತ್ಯವೋ ಹಾಗೆಯೇ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಅಷ್ಟೇ ಸತ್ಯ ಎಂದರು.

ಇಂದಿನ ಯುವಕರು ನಾಡು ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ನಾಡು, ನುಡಿ, ನೆಲ, ಜಲ ರಕ್ಷಣೆ ನಮ್ಮೆಲರ ಹೊಣೆಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಕನ್ನಡದ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಡು ನುಡಿಗೆ ದುಡಿದವರನ್ನು ನಾವು ನಿತ್ಯ ಸ್ಮರಿಸಬೇಕು. ಇತರೆ ಭಾಷೆಗಳಿಗಿಂತ ಕನ್ನಡ ಬಾಷೆ ಅತ್ಯಂತ ಬಿನ್ನವಾದದ್ದು. ಏಕೆಂದರೆ ಪ್ರತಿ ಅಕ್ಷರಗಳು ಗುಂಡಾಕಾರವಾಗಿ ಮುತ್ತಿನ ಮಣ ಗಳಂತೆ ಇವೆ ಎಂದರು. ರಾಜ್ಯೋತ್ಸವ ಬರಿ ನ.೧ಕ್ಕೆ ಸೀಮಿತವಾಗದೆ ನಿರಂತರವಾಗಿ ಕನ್ನಡ ಕಟ್ಟುವ ಕೆಲಸವಾಗಬೇಕು ಎಂದರು.

ಕರವೇ ಜಿಲ್ಲಾ ಅಧ್ಯಕ್ಷ ದೀಪಕ ಗುಡಕನಟ್ಟಿ ಮಾತನಾಡಿ, ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೇ ಆಗಿದ್ದಾರೆ. ಸರಕಾರದ ಎಲ್ಲಾ ಇಲಾಖೆಯು ಸೇರಿದಂತೆ ಎಲ್ಲಾ ವ್ಯವಹಾರದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕು. ಶಿಕ್ಷಣದಲ್ಲಿ ನಮ್ಮ ಸಂಸ್ಕೃತಿ ಸಂಸಾರ ಅಳವಡಿಕೆ ಆಗಬೇಕು ಎಂದರು.

ಸಾನಿದ್ಯ ಕುಂದರಗಿ ಅಮರೇಶ್ವರ ಸ್ವಾಮೀಜಿ ವಹಿಸಿದ್ದರು, ರಾಜ ರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಎಂ.ಎನ್.ಮಠದ ತಹಸಿಲ್ದಾರ, ಪಪಂ ಬಿ.ಎನ್.ತಹಸಿಲ್ಧಾರ, ಕರವೇ ರಾಜ್ಯ ಘಟಕದ ಸಂಚಾಲಕ ಸುರೇಶ ಗೊವನ್ನವರ ಸೇರಿದಂತೆ ಅನೇಕರು ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!