ಸಾಲಭಾದೆ ತಾಳಲಾರದೆ ರೈತ ನೇಣಿಗೆ ಶರಣು
ಅಥಣಿ : ಸಾಲಭಾದೆ ತಾಳಲಾರದೆ ರೈತ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರ ಪಿ ಎ ಗ್ರಾಮದಲ್ಲಿ ನಡೆದಿದೆ.
ರಾಜು ನಾಮದೇವ ಪವಾರ (32) ಮೃತ ದುರ್ದೈವಿಯಾಗಿದ್ದು ಇಂದು ಮದ್ಯಾನ 11 : ಗಂಟೆಗೆ ಮನೆಯ ಮೇಲ್ಚಾವಣಿಯ ಕಬ್ಬಿಣ ಎಂಗಲ್ ಗೆ ನೇಣು ಬಿಗಿದು ಆತ್ಮಹತ್ಯಗೆ ಶರಣಾಗಿದ್ದಾನೆ.
ಮೃತ ರಾಜು ಪವಾರ ಹಲವು ಬ್ಯಾಂಕ್ ನಲ್ಲಿ 10 ಲಕ್ಷ ಸಾಲ ಮಾಡಿದ್ದು 6 ಎಕರೆ ಭೂಮಿ ಹೊಂದಿದ ಈತನಿಗೆ ನೀರಿಲ್ಲದೆ ಕಬ್ಬು ಸಂಪೂರ್ಣ ಒಣಗಿ ಹೋಗಿತ್ತು ಇನ್ನು ಸಾಲ ಮರುಪಾವತಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ನೊಂದು ನೇಣಿಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪಿಎಸ್ಐ ಶಿವಾನಂದ ಕಾರಜೋಳ, ಎಎಸ್ಐ ದೇವಮಾನೆ. ಸಿಬ್ಬಂದಿ ಗುಡ್ಡೋಡಗಿ ಪರಿಶೀಲನೆ ನಡೆಸಿದ್ದಾರೆ ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದೆ.


