ಸ್ವಚ್ಚತೆ ಪಾಠ ಕಲಿಯಲು ಇಂದೋರ್ ಹೊರಟ ಮಹಾನಗರ ಪಾಲಿಕೆ ಸದಸ್ಯರು
ಬೆಳಗಾವಿ : ಮಹಾನಗರ ಪಾಲಿಕೆ ಅಭಿವೃದ್ಧಿ ಸೇರಿದಂತೆ ಅಭ್ಯಾಸಕ್ಕಾಗಿ ಸದಸ್ಯರು ಇಂದೋರ್ ಗೆ ಅಭ್ಯಾಸ ಪ್ರವಾಸಕ್ಕೆ ತೆರಳುವ ಠರಾವ್ ಪಾಸ್ ಮಾಡಲಾಗಿದೆ.
ಶನಿವಾರ ಮಹಾಮಗರ ಪಾಲಿಕೆ ಸದಸ್ಯರಿಂದ ಮಹತ್ವದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಹಲವು ಠರಾವ್ ಪಾಸ್ ಮಾಡಿದ್ದು ಮಾತ್ರವಲ್ಲದೆ. ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚೆ ನಡೆಸಲಾಯಿತು.
ಮಧ್ಯಪ್ರದೇಶದ ಇಂದೋರ್ ನಗರದ ಪಾಲಿಕೆಯ ಸದಸ್ಯರ ಅಭ್ಯಾಸ ಪ್ರವಾಸಕ್ಕೆ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಪಡೆದು ಮೇಯರ್ ಠರಾವ್ ಪಾಸ್ ಮಾಡಿದರು.


