ರಸ್ತೆ ಅಪಘಾತದಲ್ಲಿ ಯೋಧ ಸಾವು
ಅಥಣಿ : ರಸ್ತೆ ಅಪಘಾತದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಅಥಣಿ ತಾಲೂಕಿನ ನದಿ – ಇಂಗಳಗಾಂವ ಗ್ರಾಮದ ಯೋಧ ಲಕ್ಷ್ಮಣ ಘೋರ್ಪಡೆ ರಜೆ ಹಿನ್ನಲೆಯಲ್ಲಿ ಸ್ವ ಗ್ರಾಮಕ್ಕೆ ಆಗಮಿಸಿದಗದರು. ಈ ಸಂದರ್ಭದಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ಯೋಧನ ಅಂತ್ಯಕ್ರಿಯೆ ಶುಕ್ರವಾರ ಸ್ವ ಗ್ರಾಮದಲ್ಲಿ ನೆರವೇರಲಿದೆ.


