ಬೆಳಗಾವಿ : ಪುಷ್ಪ ಚಲನಚಿತ್ರದ ಮಾದರಿಯಲ್ಲಿ ಗೋವಾ ಮೂಲಕ ಲಕ್ಷಾಂತರ ಮೌಲ್ಯದ ಸಾರಾಯಿ ಸಾಗಿಸುತ್ತಿದ್ದ ತಂಡ ಅಬಕಾರಿ ಪೊಲೀಸರ ವಶಕ್ಕೆ ಬಿದ್ದಿದ್ದು, ಲಕ್ಷಾಂತರ ಮೌಲ್ಯದ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಳ್ಳ ದಾರಿಯಲ್ಲಿ ಸಾರಾಯಿ ಸಾಗಿಸುತ್ತಿದ್ದವರನ್ನು ಬಲೆಗೆ ಬೀಳಿಸಿದ್ದಾರೆ.

ಗೋವಾದಿಂದ ಬಂದ ಲಾರಿಯಲ್ಲಿ ಪ್ಲಾವುಡ್ ತುಂಬಲಾಗಿತ್ತು. ಒಳಗೆ ಲಕ್ಷಾಂತರ ಮೌಲ್ಯದ ಸಾರಾಯಿ ಇಟ್ಟು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಸಾಗಾಟ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅಬಕಾರಿ ಪೊಲೀಸರು ತಪಾಸಣೆ ನಡೆಸಿದ್ದಾಗ ಕೃತ್ಯ ಬಯಲಾಗಿದೆ.