Select Page

Advertisement

ಮಗ ಚಿನ್ನದ ತಟ್ಟೆಯಲ್ಲಿ ತಿನ್ನುವುದನ್ನು ತಾಯಿ ನೋಡಬೇಕು – ಸವದಿ ಬೇಡಿಕೆಗೆ ಸಿಎಂ, ಡಿಸಿಎಂ ತಬ್ಬಿಬ್ಬು

ಮಗ ಚಿನ್ನದ ತಟ್ಟೆಯಲ್ಲಿ ತಿನ್ನುವುದನ್ನು ತಾಯಿ ನೋಡಬೇಕು – ಸವದಿ ಬೇಡಿಕೆಗೆ ಸಿಎಂ, ಡಿಸಿಎಂ ತಬ್ಬಿಬ್ಬು

ಬೆಳಗಾವಿ : ನನ್ನ ಮಗ ಚಿನ್ನದ ತಟ್ಟೆಯಲ್ಲಿ ಊಟ ಮಾಡುವುದನ್ನು ನನ್ನ ತಾಯಿ ನೋಡುವಂತ ವರದಂತೆ ಜಿಲ್ಲೆಯ ಅನೇಕ ಅಭಿವೃದ್ಧಿ ಕಾಮಗಾರಿಗೆ ಹಣ ನೀಡುವಂತೆ ಲಕ್ಷ್ಮಣ ಸವದಿ ಕೇಳಿದ್ದ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಕ್ಷಣಕಾಲ ತಬ್ಬಿಬ್ಬಾದರು.

ಹೌದು ಈಗಾಗಲೇ ಗ್ಯಾರಂಟಿ ಯೋಜನೆಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಅವರ ಶಾಸಕರಿಗೆ ಸಮರ್ಪಕ ಅನುಧಾನ ನೀಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಶಾಸಕ ಲಕ್ಷ್ಮಣ ಸವದಿ ಬರಪೂರ ಯೋಜನೆಗಳ ಅನುದಾನ ಕೇಳಿದರು. ಇದಕ್ಕೆ ಸಿಎಂ ಹಾಗೂ ಡಿಸಿಎಂ ಕ್ಷಣಕಾಲ ವಿಚಾರ ಮಾಡಿ ಉತ್ತರ ನೀಡಿದರು.

ಹೌದು ದ್ರಾಕ್ಷಿ ಬೆಳಗಾರರಿಗೆ ಅನುಕೂಲ ಆಗುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಬೆಂಬಲ ಬೆಲೆ ಹೆಚ್ಚಿಸುವಂತೆ ಮಾಡಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಅಲ್ಲಿನ ಸರ್ಕಾರ ಗರ್ಭಿಣಿಯರಿಗೆ ಪೌಷ್ಟಿಕಾಹಾರ ನೀಡುವ ನಿಟ್ಟಿನಲ್ಲಿ ಒಣದ್ರಾಕ್ಷಿ ವಿತರಣೆ ಮಾಡುತ್ತಿದ್ದು ನಮ್ಮ ರಾಜ್ಯದಲ್ಲಿ ಮಾಡುವಂತೆ ಆಗ್ರಹಿಸಿದರು.

ಕಾಗವಾಡ ಮತಕ್ಷೇತ್ರದಲ್ಲಿ ಬಸವೇಶ್ವರ ಏತ ನೀರಾವರಿ ಕಾಮಗಾರಿ ಮುಕ್ತಾಯಕ್ಕೆ 60 ಕೋಟಿ ಹಣ ನೀಡಬೇಕು. ಹಾಗು ಅಥಣಿ ತಾಲೂಕಿನ ನೀರಾವರಿ ಹೊರತಾದ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗುಂತೆ ಯೋಜನೆ ಹಮ್ಮಿಕೊಳ್ಳಲು ಅನುದಾನ ನೀಡಬೇಕು. ಮತ್ತು ಅಥಣಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಜಮೀನು ಮೀಸಲಿಟ್ಟಿದ್ದು ಈ ಕಾರಣ ಅನುದಾನ ಕೊಡಬೇಕು ಎಂದು ಶಾಸಕ ಸವದಿ ಸಿಎಂ ಹಾಗೂ ಡಿಸಿಎಂ ಬಳಿ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್. ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಬರವಸೆಯಂತೆ ನಡೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ಅನೇಕ ತಾಲೂಕಿನ ಅಭಿವೃದ್ಧಿ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ನೀಡಿ ಅಭಿವೃದ್ಧಿಗೆ ಕೈ ಜೋಡುಸುತ್ತೇವೆ ಎಂಬ ಬರವಸೆ ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!