ಜೈ ಶ್ರೀರಾಮ ಹೇಳಿದ್ದಕ್ಕೆ ಲಕ್ಷ್ಮಣ ಸವದಿ ಪುತ್ರನಿಂದ ಬಿಜೆಪಿ ಕಾರ್ಯಕರ್ತನಿಗೆ ಧಮ್ಕಿ
ಅಥಣಿ : ವಿಧಾನಸಭೆ ಚುನಾವಣೆ ಮುಗಿದು ಆಯಾ ಕ್ಷೇತ್ರದ ಶಾಸಕರು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ನಿರತರಾಗಿದ್ದಾರೆ. ಆದರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಮಾತ್ರ ಚುನಾವಣಾ ಸಂದರ್ಭದಲ್ಲಿನ ವೈಷಮ್ಯ ಮುಂದಿಟ್ಟುಕೊಂಡು ಜೈ ಶ್ರೀರಾಮ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಕರೆ ಮಾಡಿ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದು, ಸಧ್ಯ ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೌದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಬಿಜೆಪಿ ಕಾರ್ಯಕರ್ತ ಎನ್ನಲಾದ ಇಬ್ಬರಿಗೆ ಕರೆ ಮಾಡಿ ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ನಗರದ ಸರ್ಕಲ್ ಒಂದರಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗಿದ್ದನ್ನು ನೆಪಮಾಡಿಕೊಂಡು ಯುವಕನ ಖಾಸಗಿ ಬದುಕು ಸರ್ವನಾಶ ಮಾಡುವುದಾಗಿ ಧಮ್ಕಿ ಹಾಕಲಾಗಿದೆ. ಈ ಆಡಿಯೋ ಸುಮಾರು ಹತ್ತು ನಿಮಿಷಗಳ ವರೆಗೂ ಇದೆ.
ಇನ್ನೂ ಈ ಆಡಿಯೋದಲ್ಲಿ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿಯ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ವಿರುದ್ಧ ಸವದಿ ಪುತ್ರ ನಾಲಿಗೆ ಹರಿಬಿಟ್ಟಿದ್ದಾರೆ. ಯುವಕನಿಗೆ ಇನ್ನುಮುಂದೆ ನಿನ್ನ ಬೆಂಬಲಕ್ಕೆ ಯಾರು ಬರುತ್ತಾರೆ ಎಂದು ನೋಡಿಕೊಳ್ಳುವೆ. ಜೊತೆಗೆ ನಿನ್ನ ಟಿಪ್ಪರ್ ವಾಹನದ ಕುರಿತು ಮಾಹಿತಿ ಪಡೆದುಕೊಳ್ಳುವೆ ಎಂದು ಆವಾಜ್ ಹಾಕುತ್ತಾರೆ.
ಚುನಾವಣೆ ಕಳೆದು ಜನ ತಮ್ಮ ಕೆಲಸಕ್ಕೆ ಹತ್ತಿದರೂ ಈ ರಾಜಕಾರಣಿಗಳು ಮಾತ್ರ ವೈಯಕ್ತಿಕ ಹಗೆತನ ಸಾಧಿಸುವ ಮಟ್ಟಿಗೆ ಮುಂದುವರಿದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ನಾಚಿಕೊಳ್ಳುವಂತೆ ಮಾಡಿದೆ. ಅಷ್ಟೇ ಅಲ್ಲದೆ ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಶಾಸಕರ ಪುತ್ರ ಅಷ್ಟೊಂದು ಆಕ್ರೋಶ ಹೊರ ಹಾಕುವುದರ ಅವಶ್ಯಕತೆ ಉತ್ತಾ ಎಂಬ ಪ್ರಶ್ನೆ ಮೂಡುವುದು ಸಹಜ.


