Select Page

Advertisement

ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿ..! ಮೇ 20 ಕ್ಕೆ ಪ್ರಮಾಣವಚನ ಸ್ವೀಕಾರ.

ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿ..! ಮೇ 20 ಕ್ಕೆ ಪ್ರಮಾಣವಚನ ಸ್ವೀಕಾರ.

ನವದೆಹಲಿ : ಕಳೆದ ಮೂರು ದಿನಗಳಂದ ನಡೆದ ತೀವ್ರ ಕಸರತ್ತಿನ ನಂತರ ಕಾಂಗ್ರೆಸ್ ಪಕ್ಷದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಪೈನಲ್ ಆಗಿದ್ದು, ಏಕೈಕ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಆಯ್ಕೆ ಆಗಿದ್ದು ಮೇ 20 ರಂದು ಪ್ರಮಾಣವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಇಂದು ನವದೆಹಲಿಯಲ್ಲಿ ನಡೆದ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ. ಶಿ ವೇಣುಗೋಪಾಲ. ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರನ್ನು ಘೋಷಣೆ ಮಾಡಿದರು.

ನವದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಸಭೆ ನಡೆಸಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವರಿಷ್ಠರು ನಿರಂತರ ಸಭೆ ನಡೆಸಿದ್ದರು. ಆದರೆ ಡಿ.ಕೆ ಶಿವಕುಮಾರ್ ಸಿಎಂ ಗಾದಿಗೆ ಹಠ ಹಿಡಿದ ಕಾರಣ ವಿಳಂಬ ಆಗಿತ್ತು.

ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೈಕಮಾಂಡ್ ಒಂದು ಸಂದಾನಕ್ಕೆ ಬಂದಿದ್ದು ಬರುವ ಎರಡು ವರ್ಷಗಳ ಅವಧಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹಾಗೂ ಡಿಕೆಶಿ ಅವರನ್ನು ಡಿಸಿಎಂ ಮಾಡುವ ಜೊತೆಗೆ ಎರಡು ಪ್ರಮುಖ ಖಾತೆ ನೀಡುವ ಮಾತುಕತೆ ನಡೆದಿದ್ದು, ಉಳಿದ ಮೂರು ವರ್ಷಗಳ ಅವಧಿಗೆ ಸಿಎಂ ಮಾಡುವ ಭರವಸೆ ಡಿಕೆಶಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!