ಜೈನ ಸಮುದಾಯದಿಂದ ಒಂದೇ ಪಕ್ಷಕ್ಕೆ ಬೆಂಬಲ ನೀಡಿಲ್ಲ – ಸವದಿ ವಿರುದ್ಧ ತಿರುಗಿಬಿದ್ದ ಜೈನ ಸಮುದಾಯದ ಮುಖಂಡರು
ಅಥಣಿ : ಜೈನ ಸಮಾಜದ ಕೆಲವು ಮುಖಂಡರು ನಮ್ಮ ಗಮನಕ್ಕೆ ತರದೆ ನಮ್ಮ ಸಮುದಾಯ ಜನರನ್ನು ಒಂದೆಡೆ ಸಭೆ ಕರೆದು ಒಂದು ಪಕ್ಷಕ್ಕೆ ಬೆಂಬಲ ಹೇಳಿರುವುದು ಸ್ವಾರ್ಥ ರಾಜಕಾರಣವಾಗಿದೆ. ಅದಕ್ಕಾಗಿ ಸಮಾಜ ಬಾಂಧವರು ತಮ್ಮ ಮತದಾನ ಹಕ್ಕನ್ನು ನಮ್ಮ ಸಮುದಾಯದ ಏಳಿಗೆಗಾಗಿ ಶ್ರಮಿಸಿದವರಿಗೆ ನೀಡಬೇಕು ಎಂದು ಅಥಣಿ ತಾಲೂಕ ಜೈನ ಸಮುದಾಯದ ತಾಲೂಕ ಅಧ್ಯಕ್ಷ ಜಿನಗೌಡ ಪಾಟೀಲ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಸಮುದಾಯದಲ್ಲಿನ ಕೆಲವು ಮುಖಂಡರು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೈನ ಸಮಾಜದ ಅನೇಕ ಮುಖಂಡರನ್ನು ಹೊರಗಿಟ್ಟು ಈ ಸಭೆ ಮಾಡಿದ್ದಾರೆ. ಮತ್ತು ಈ ಸಭೆಯಲ್ಲಿ ಒಂದು ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಸ್ವತಂತ್ರವಾದ ಮತದಾನ ಹಕ್ಕು ಇದೆ. ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ನಮ್ಮ ಸಮಾಜದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸಿದವರಿಗೆ ತಮ್ಮ ಮತಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಲೆನಿನ್ ಹಳಿಂಗಳಿ, ಮಹಾವೀರ ಪಡನಾಡ, ಗೋಪು ಸಪ್ತಸಾಗರ, ನಿಂಗಪ್ಪ ನಂದೇಶ್ವರ, ದೀಪಕ ಪಾಟೀಲ, ದಿರಜ ಪಾಟೀಲ, ಬಾಳಾಸಾಹೇಬ ಕವಟಕೊಪ್ಪ, ಮುದುಕ ಬೊಮ್ಮಣ್ಣವರ, ಅಶೋಕ ದಾನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಫೋಟೋ ಶೀರ್ಷಿಕೆ : ಅಥಣಿ ಪಟ್ಟಣದಲ್ಲಿ ಜೈನ ಸಮಾಜದ ತಾಲೂಕ ಅಧ್ಯಕ್ಷ ಜಿನಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.(02ಅಥಣಿ 03)


