ಬೆಳಗಾವಿ : ರೈತರ ಹೋರಾಟದ ಕಿಚ್ಚು ಜಿಲ್ಲೆಯಾದ್ಯಂತ ವ್ಯಾಪಿಸುತ್ತಿರುವ ವೇಳೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಮಹತ್ವದ ಜವಾಬ್ದಾರಿ ನಿಭಾಯಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯಾವುದೇ ಹಂತದಲ್ಲೂ ಹೋರಾಟ ಮಾಡುತ್ತಿದ್ದ ರೈತರಿಗೆ ತೊಂದರೆ ಆಗದಂತೆ ನೋಡಿಕೊಂಡರು. ಜೊತೆಗೆ ಹೋರಾಟದ ಸ್ವರೂಪ ಬದಲಾಗದಂತೆ ಎಚ್ಚರವಹಿಸಿ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಮೂಲಕ ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡರು.

ಇನ್ನೂ ರೈತ ಮುಖಂಡರು ಕೊನೆಗೂ ಪ್ರತಿಭಟನೆ ಕೈಬಿಟ್ಟು ಸಂಧಾನ ಸೂತ್ರಕ್ಕೆ ಒಪ್ಪಿಗೆ ಸೂಚಿಸುವಲ್ಲಿ ಜಿಲ್ಲಾಧಿಕಾರಿ ಪಾತ್ರ ಮಹತ್ವದ್ದಾಗಿದೆ. ಅಷ್ಟೇ ಅಲ್ಲದೆ ಉಸ್ತುವಾರಿ ಸಚಿವರು, ಸಕ್ಕರೆ ಕಾರ್ಖಾನೆ ಮಾಲಿಕರ ಜೊತೆ ರೈತರನ್ನೂ ಒಗ್ಗೂಡಿಸಿಕೊಂಡು ಪರಿಸ್ಥಿತಿ ಸುಖಾಂತ್ಯಕ್ಕೆ ತಂದಿದ್ದು ಇವರ ಹೆಗ್ಗಳಿಕೆ.