ಧಾರವಾಡ : ಭೀಕರ ಪ್ರವಾಹ, ಸಾವು ನೋವುಗಳು ಎಲ್ಲಾ ಕಳೆದು ಹಿಂಗಾರು ಉತ್ತಮ ಮಳೆಯಾಗಲಿದ್ದು ರೈತರಿಗೆ ಉತ್ತಮ ಬೆಳೆ ಬರಲಿಗೆ ಎಂದು ಕೋಡಿಮಂಠದ ಶಿವಾನಂದ ಶಿವಯೋಗಿ ರಾಜೇಂದ್ರ ‌ಸ್ವಾಮೀಜಿ‌ ಭವಿಷ್ಯ ನುಡಿದಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಇವರು. ಉತ್ತಮ ಮಳೆಯಾಗಿ ಜನರಿಗೆ ನೆಮ್ಮದಿ ತರಲಿದೆ ಎಂದಿದ್ದಾರೆ. ಸಧ್ಯ ಮಳೆ ಅಭಾವದಿಂದ ‌ಕಂಗೆಟ್ಟಿರುವ ಜನರಿಗೆ ಕೋಡಿ ಶ್ರೀ ಭವಿಷ್ಯ ಕೊಂಚ ಸಮಾಧಾನ ತರಿಸಿದೆ.

ಈ ಹಿಂದೆ ಅವರು ಹೇಳಿದ್ದ ಪ್ರವಾಹದ ಕುರಿತಾದ ಭವಿಷ್ಯದ ನಿಜವಾಗಿತ್ತು. ಭೀಕರ ಜಳಪ್ರಳಯಕ್ಕೆ ಸಾವಿರಾರು ಜನ ಬಲಿಯಾಗಿದ್ದರು. ಆದರೆ ಈಗ ಶ್ರೀಗಳ ಭವಿಷ್ಯ ಜನರಲ್ಲಿ ಕೊಂಚ ನೆಮ್ಮದಿಯ ಭಾವ ತರಿಸಿದೆ.