ಬೆಳಗಾವಿ : ಗಡಿ ಭಾಗದ ರೈತರಿಗೆ ಮಹಾರಾಷ್ಟ್ರ ಮೂಲದ ಸಕ್ಕರೆ ಕಾರ್ಖಾನೆ ಭರ್ಜರಿ ದರ ನಿಗದಿ ಮಾಡಿದ್ದು ಪ್ರತಿ ಟನ್ ಕಬ್ಬಿಗ 4000 ರೂ. ಘೋಷಣೆ ಮಾಡುವ ಮೂಲಕ ಸಂಚಲನ ಮೂಡಿಸಿದೆ.
ಪುಣೆ ಜಿಲ್ಲೆಯ ಸೋಮೇಶ್ವರ ಸಹಕಾರಿ ಕಾರ್ಖಾನೆ ಆಡಳಿತ ಮಂಡಳಿ ಸಭೆ ನಡೆಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ FRP ದರಕ್ಕಿಂತ ಪ್ರತಿ ಟನ್ ಕಬ್ಬಿಗೆ 515 ರೂ ಹೆಚ್ಚಿಸಿ ಪ್ರತಿ ಟನ್ ಗೆ 4 ಸಾವಿರ ರೂ. ಘೋಷಣೆ ಮಾಡಲಾಗಿದೆ.
ಮಾಸಿಕ ಆಧಾರದ ಮೇಲೆ ಬೆಲೆ : ವರ್ಷದ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಬರುವ ಕಬ್ಬಿಗೆ ಪ್ರತಿ ಟನ್ ಗೆ 3800 ಫೆಬ್ರವರಿ ಗೆ 3900 ಹಾಗೆಯೇ ಮಾರ್ಚ್ ತಿಂಗಳಲ್ಲಿ ಕಳುಹಿಸುವ ಕಬ್ಬಿಗೆ 4 ಸಾವಿರ ರೂ. ನೀಡಲು ಮುಂದಾಗಿದ್ದಾರೆ.




