ಬೆಳಗಾವಿ : ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಬೆಳಗಾವಿ ಜಿಲ್ಲೆಯ ಒಂಬತ್ತು ತಾಲೂಕು ಘೋಷಣೆ ಮಾಡುವ ಮೂಲಕ ಸರಕಾರ ಕೊನೆಗೂ ಕಣ್ಣು ತೆರೆದಿದೆ. ಈ ಕುರಿತು ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಸರಕಾರ ಹೊರಡಿಸಿರುವ ಎರಡನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಕಿತ್ತೂರು, ಮೂಡಲಗಿ, ನಿಪ್ಪಾಣಿ ಹಾಗೂ ಯರಗಟ್ಟಿ ಯನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ.
ವಿಪರ್ಯಾಸವೆಂದರೆ ಈ ಪಟ್ಟಿಯಲ್ಲಿ ರಾಮದುರ್ಗ ತಾಲೂಕು ಸೇರ್ಪಡೆ ಮಾಡಲಾಗಿಲ್ಲ. ಮಳೆ ಅಭಾವ ಈ ತಾಲೂಕಿನಲ್ಲಿ ಹೆಚ್ಚಿದ್ದು ಸರಕಾರ ಯಾಕೆ ಕೈಬಿಟ್ಟಿದೆ ಎಂಬ ಪ್ರಶ್ನೆ ರೈತರಲ್ಲಿ ಮನೆಮಾಡಿದೆ.





