ಚಿಕ್ಕಮಗಳೂರು : ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಅಕ್ಕ-ತಮ್ಮಂದಿರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ದಾರುಣ ಹಾಗೂ ಆಘಾತಕಾರಿ (Shocking) ಘಟನೆ ವರದಿಯಾಗಿದೆ.
ಮೃತರನ್ನು ಕುಣಿಗಲ್ ಮೂಲದ ರೋಹಿಣಿ ಹಾಗೂ ಬೆಂಗಳೂರಿನ ಮೂಲದ ನವೀನ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಇಬ್ಬರು ಡೆತ್‌ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸಮಾಜದವರ ಚುಚ್ಚುಮಾತುಗಳಿಗೆ ನೊಂದು ಈ ಕೃತ್ಯಬಾಳಿದ್ದಾರೆ.
ಮೃತಪಟ್ಟ ಇಬ್ಬರೂ ಅಕ್ಕ ಹಾಗೂ ತಮ್ಮನಾಗಿದ್ದಾರೆ. ಇವರ ನಡುವಿನ ಶುಭ ಹಾಗೂ ಪವಿತ್ರವಾದ ರಕ್ತಸಂಬಂಧದ ಬಾಂಧವ್ಯವನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು ಸಂಬಂಧಿಕರು, ಇವರದ್ದು ಪ್ರೀತಿ-ಪ್ರೇಮದ ಸಂಬಂಧವೆಂದು ವಿನಾಕಾರಣ ಅಪಪ್ರಚಾರ ಮಾಡಿ ನಿರಂತರವಾಗಿ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳದಲ್ಲಿ ಮೃತರ ಕೈಯಲಿದ್ದ ಡೆತ್ ನೋಟ್ ನಲ್ಲಿ ನಮ್ಮ ಅಕ್ಕ ಹಾಗೂ ತಮ್ಮನ ಪವಿತ್ರ ಸಂಬಂಧ ಹೀಯಾಳಿಸುತ್ತಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಅರಸೀಕೆರೆ ಪೊಲೀಸ್ ಭಾಷೆಯಲ್ಲಿ ಪ್ರಕರಣ ದಾಖಲಾಗಿದೆ.


