ನೀಟ್ ಅಕ್ರಮದ ಕುರಿತು ದೆಹಲಿಯಲ್ಲಿ ನಡೆದ ಯುವಕರ ಪ್ರತಿಭಟನೆಗೆ ಸರಕಾರ ಮಣಿದಿದ್ದು ಕೊನೆಗೂ ಶಿಕ್ಷಣ ಸಚಿವರ ರಾಜೀನಾಮೆ ಪಡೆಯುವ ಯುವಕರ ಆಕ್ರೋಶಕ್ಕೆ ತಲೆಬಾಗಿದೆ.

ಕಳೆದ ಕೆಲ ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಸಿಜೆಪಿ ನಾಯಕರು ಹಾಗೂ ವಿದ್ಯಾರ್ಥಿ ಸಮೂಹ ನೀಟ್ ಅಕ್ರಮದ ಕುರಿತು ಧ್ವನಿ ಎತ್ತಿದ್ದವು.‌

ಈ ನಡುವೆ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಹಿಂಸಾರೂಪಕ್ಕೂ ತೆರಳಿತ್ತು. ಕೊನೆಗೂ ಯುವರಕ ಆಕ್ರೋಶಕ್ಕೆ ಮಣಿದ ಕೇಂದ್ರ ಸರಕಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದೆ.