ಬೆಳಗಾವಿ : ಆಕಸ್ಮಿಕ ಬೆಂಕಿಗೆ ಮನೆ ಆಹುತಿ ಯಾಗಿದ್ದಲ್ಲದೆ ಅಪಾರ ಪ್ರಮಾಣದ ಹಾನಿ ಉಂಟಾದ ಕುಟುಂಬಕ್ಕೆ ಮುರಗೇಂದ್ರಗೌಡಾ ಪಾಟೀಲ್ ಪೌಂಡೇಶನ್ ಆಸರೆಯಾಗಿದೆ.
ನಗರದ ಕಾಮತ ಗಲ್ಲಿಯಲ್ಲಿ ಪೀರಾಜಿ ಸಾವಂತ್ ಅವರ ನಿವಾಸಕ್ಕೆ ಆಕಸ್ಮಿಕವಾಗಿ ಬೆಂಕಿತಗುಲಿದ ಪರಿಣಾಮ ಅವರ ಕುಟುಂಬಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು.
ಸಹಾಯ ಹಸ್ತ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶ್ರೀ ಮುರಗೇಂದ್ರಗೌಡಾ ಪಾಟೀಲ್ ಪೌಂಡೇಶನ ವತೀಯಿಂದ ರೇಷನ ಕೀಟ್, ಬೇಡಶಿಟಗಳು ಮತ್ತು ಚೇಕ್ ಮುಂಖಾಂತರ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದೆ.


