ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ (Kodi Mutt Prediction) ನುಡಿಯುವ ಭವಿಷ್ಯವಾಣಿಗಳು ಕಾಲಕಾಲಕ್ಕೆ ಸುದ್ದಿಯಾಗುತ್ತಾ ಬಂದಿರುವುದು ಹೊಸದೇನಲ್ಲ.

ಕೊರೋನಾ ಮಹಾಮಾರಿ, ಚಂದ್ರಯಾನ ಯೋಜನೆ, ಜಾಗತಿಕ ಯುದ್ಧಗಳು ಹಾಗೂ ರಾಜಕೀಯ ರಂಗದ ಮಹತ್ವದ ತಿರುವುಗಳ ಬಗ್ಗೆ ಅವರು ಹಿಂದೆ ನೀಡಿದ್ದ ಮುನ್ಸೂಚನೆಗಳು ನಿಜವಾಗಿದ್ದವು.

ಇದೀಗ ದೆಹಲಿಯಲ್ಲಿ ಬೆಂಕಿಯಂತೆ ಹಬ್ಬಿರುವ ನೀಟ್ (NEET Scam) ಪರೀಕ್ಷೆ ಅಕ್ರಮದ ಕಾವು ಹೆಚ್ಚಾಗುತ್ತಿರುವ (CJP Protest) ಬೆನ್ನಲ್ಲೇ, ಕೋಡಿಶ್ರೀಗಳು ನುಡಿದಿದ್ದ ಮತ್ತೊಂದು ಭವಿಷ್ಯದ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿವೆ.

ಸ್ವಾಮೀಜಿಯವರು ಈ ಹಿಂದೆ ಭವಿಷ್ಯ ನುಡಿದಿದ್ದರು. “ಅರಸನ ಅರಮನೆಗೆ ಕಾರ್ಮೋಡ ಕವಿದಿದೆ” ಹಾಗೂ “ದೇಶದಲ್ಲಿ ಆಂತರಿಕ ಕಲಹಗಳು ಹೆಚ್ಚಾಗಲಿವೆ” ಎಂದು ಎಚ್ಚರಿಸಿದ್ದರು.

ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಾಡುತ್ತಿರುವ ಈ ಬೃಹತ್ ನೀಟ್ ಹಗರಣ ಹಾಗೂ ಸರ್ವಜನಿಕ ಪ್ರತಿಭಟನೆ ಗಮನಿಸಿದರೆ, ಕೋಡಿಶ್ರೀಗಳ ಆ ಮಾತುಗಳು ಈಗಿನ ರಾಜಕೀಯ ಪರಿಸ್ಥಿತಿಗೆ ಅನ್ವಯಿಸುತ್ತವೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.