ಬೆಳಗಾವಿ : ಮೊಬೈಲ್ ವಿಚಾರಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದು ದೇವಸ್ಥಾನದ ಅಂಗಳದಲ್ಲೇ ಬೀಕರ ಕೊಲೆ ನಡೆದ ಪ್ರಕರಣ ಸವದತ್ತಿ ತಾಲೂಕಿನ ಚಿಕ್ಕಬುದನೂರ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಫಕೀರಪ್ಪ ಪೆಡ್ಡೆನ್ನವರ (40) ಮೃತ ವ್ಯಕ್ತಿ. ಶುಕ್ರವಾರ ಸಂಜೆ ಲಕ್ಷ್ಮೀ ದೇವಸ್ಥಾನದಲ್ಲಿ ಫಕೀರಪ್ಪ ಮಲಗಿದ್ದ ವೇಳೆ ಈತನ ಸ್ನೇಹಿತ ಮಲ್ಲಿಕಾರ್ಜುನ ಪೂಜೇರೆ ಎಂಬಾತ ಬಂದು ತನ್ನ ಮೋಬೈಲ್ ನಿನ್ನ ಬಳಿ ಇದ್ದು ಕೊಡುವಂತೆ ಕೇಳಿದ್ದಾನೆ.
ಸ್ನೇಹಿತನ ಮೋಬೈಲ್ ಇಟ್ಟುಕೊಂಡಿದ್ದ ಫಕೀರಪ್ಪ ಆತನಿಗೆ ಕೊಡದೆ ರಾತ್ರಿ ಕೋಡುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಮಲ್ಲಿಕಾರ್ಜುನ ಪಕ್ಕದಲ್ಲೇ ಇದ್ದ ಕರ್ಪೂರ ಹಚ್ಚುವ ಕಲ್ಲನ್ನು ಎತ್ತಿ ಫಕೀರಪ್ಪನ ತಲೆ ಮೇಲೆ ಹಾಕಿದ್ದಾನೆ.
ಗಂಭೀರವಾಗಿ ಗಾಯಗೊಂಡ ಫಕೀರಪ್ಪ ಸ್ಥಳದಲ್ಲಿ ಸಾವಣಪ್ಪಿದ್ದಾನೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


