ಅಥಣಿಯಲ್ಲಿ ಭೀಕರ ಅಪಘಾತ ; ಟಿಪ್ಪರ್ ಕೆಳಗೆ ಸಿಲುಕಿ ವ್ಯಕ್ತಿ ಸಾವು

ಅಥಣಿ : ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಶರವೇಗದಲ್ಲಿ ಬಂದ ಟಿಪ್ಪರ ಹರಿದು ವೃದ್ದ ಸ್ಥಳದಲ್ಲೆ ಸಾವಿಗಿಡಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಈ ಘಟನೆಯಲ್ಲಿ ಮೃತಪಟ್ಟ ವೃದ್ಧ ಪಟ್ಟಣದ ಶಿವಯೋಗಿ ನಗರದ ಮಹಾಲಿಂಗಯ್ಯಾ ಭದ್ರಯ್ಯಾ ಪುರಣಿಕಮಠ (೮೫) ಎಂದು ಗುರುತಿಸಲಾಗಿದೆ.
ಟಿಪ್ಪರ ಚಾಲಕನ ಅಜಾಗೂರುಕತೆ ಹಾಗೂ ಅತೀ ವೇಗವಾಗಿ ಸಾರ್ವಜನಿಕ ರಸ್ತೆ ಮೇಲೆ ವಾಹನ ಓಡಿಸಿಕೊಂಡು ಬಂದು ರಸ್ತೆ ದಾಟುವ ವೃದ್ದನ ಮೇಲೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.
ವೃದ್ಧನ ತಲೆಯ ಮೇಲೆ ವಾಹನ ಹರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯ ಸ್ಥಳಕ್ಕೆ ಅಥಣಿ ಪೊಲೀಸ್ ರು ಬೇಟಿ ನೀಡಿ ಪರಿಶೀಲನೆ ನಡೆಸಿ ಮೃತಪಟ್ಟ ವೃದ್ದನ ಶವವನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ.
ಘಟನಾ ಸ್ಥಳದಲ್ಲೆ ಟಿಪ್ಪರ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


