ಡಿ.ಟಿ ಶ್ರೀನಿವಾಸ್ ಅವರಿಗೆ ಸಚಿವಸ್ಥಾನ ನೀಡುವಂತೆ ಆಗ್ರಹ

ಬೆಳಗಾವಿ : ಕರ್ನಾಟಕ ರಾಜ್ಯ ಯಾದವ ಗೊಲ್ಲ ಸಂಘದ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ ಶ್ರೀನಿವಾಸ್ ಅವರಿಗೆ ಸಚಿವಸ್ಥಾನ ನೀಡುವಂತೆ ಬೆಳಗಾವಿ ಜಿಲ್ಲಾ ಯಾದವ ಸಂಘ ಆಗ್ರಹಿಸಿದೆ.
ಬೆಳಗಾವಿ ಜಿಲ್ಲಾ ಯಾದವ ಸಂಘದ ಸದಸ್ಯರು ಸುದ್ದಿಗೋಷ್ಠಿ ನಡೆಸಿ, ರಾಜ್ಯದಲ್ಲಿ ಸುಮಾರು 19 ಲಕ್ಷಕ್ಕೂ ಅಧಿಕ ಯಾದವ ಸಮುದಾಯದ ಜನಸಂಖ್ಯೆ ಇದೆ. ಆದರೆ ರಾಜಕೀಯವಾಗಿ ಪ್ರಾತಿನಿಧ್ಯ ಇಲ್ಲದಂತಾಗಿದೆ. ದಿ. ಎ. ಕೃಷ್ಣಪ್ಪ ಅವರ ನಂತರ
ಕರ್ನಾಟಕ ರಾಜ್ಯ ಯಾದವ ಗೊಲ್ಲ ಸಂಘದ ಮುಂದಾಳತ್ವವನ್ನು ಡಿ.ಟಿ ಶ್ರೀನಿವಾಸ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜ್ಯಾದ್ಯಂತ ಸುತ್ತಾಡಿ ಸಮಾಜದ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.ಟಿ ಶ್ರೀನಿವಾಸ್ ಅವರು ವಿದ್ಯಾವಂತರಾಗಿದ್ದು ಅನೇಕ ಚುನಾವಣೆಯಲ್ಲಿ ಚಾಣಾಕ್ಷತನದಿಂದ ಯಶಸ್ಸು ಸಾಧಿಸಿದ್ದಾರೆ. 95 ಕ್ಕೂ ಹೆಚ್ಚು ಅತೀ ಹಿಂದುಳಿದ ಸಮಾಜಗಳನ್ನು ಸಂಘಟಿಸಿ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ. ಇವರಿಗೆ ಮುಂಬರುವ ಸಂಪುಟ ರಚನೆ ಸಂದರ್ಭದಲ್ಲಿ ಸಚಿವಸ್ಥಾನ ನೀಡುವಂತೆ ಸಂಘಟನೆ ಆಗ್ರಹಿಸಿದೆ.

