Select Page

ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹವಾಗಿತ್ತಾ..? ಗಂಭೀರ ಆರೋಪಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ..!

ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹವಾಗಿತ್ತಾ..? ಗಂಭೀರ ಆರೋಪಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ..!





ಬೆಂಗಳೂರು : ಸಿದ್ದರಾಮಯ್ಯ ಜೊತೆಗಿದ್ದ ಆಪ್ತರು ಗಟ್ಟಿಯಾಗಿ ಅವರ ಬೆನ್ನಿಗೆ ನಿಲ್ಲದೆ ಚೂರಿ ಹಾಕಿದ್ದಾರೆ ಎಂಬ ಆರೋಪಕ್ಕೆ ಸ್ವತಃ ಸತೀಶ್ ಜಾರಕಿಹೊಳಿ ಅವರೇ ಸ್ಪಷ್ಟನೆ ‌ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹ ಮಾಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಹಾಗೂ ಆಪ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಲಾಗಿತ್ತು.

ಈ‌ ಕುರಿತು ಪ್ರತಿಕ್ರಿಯೆ ನೀಡಿದ ಇವರು. ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ. ಸಿದ್ದರಾಮಯ್ಯ ಅವರು ಯಾರಿಗೂ ಹೇಳಿ ನಿರ್ಧಾರ ಕೈಗೊಂಡಿಲ್ಲ. ಸಹಿ ಸಂಗ್ರಹ ಕೇವಲ ಊಹಾಪೋಹ ಅಷ್ಟೇ.

ದೆಹಲಿಯಲ್ಲಿ ನಿರ್ಧಾರವಾಗಿದ್ದು ನಮಗೆ ಗೊತ್ತಿಲ್ಲ. 37 ಜನ ಸಹಿ ಸಂಗ್ರಹ ಎಂಬುದು ಸುಳ್ಳು ಇನ್ನುಳಿದ 100 ಜನ ಶಾಸಕರ ಅಭಿಪ್ರಾಯಕ್ಕೆ ಬೆಲೆ ಇಲ್ಲವಾ. ಸಿದ್ದರಾಮಯ್ಯ ಅವರ ನಿರ್ಧಾರದಿಂದ ಅಧಿಕಾರ ಹಂಚಿಕೆ ಮಾಲಾಗಿದೆ‌ ಎಂದರು.

ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ‌ಮುಂದುವರಿಯುವ ಕುರಿತು ಮಾತನಾಡಿ. ಅವರ ಅವಶ್ಯಕತೆ ರಾಜ್ಯಕ್ಕೆ ಇದೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಸಿದ್ದರಾಮಯ್ಯ ಅವರ ಬಳಿಕ ಅಹಿಂದ ನಾಯಕ ಯಾರು ಎಂಬ ಪ್ರಶ್ನೆಯೂ ಸದ್ಯ ಉದ್ಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಅದನ್ನು ನಿಭಾಯಿಸಲು ಸಿದ್ದ ಎಂದಿದ್ದಾರೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕ

ಸತೀಶ್ ಆಗಲಿದ್ದಾರೆ ಎಂದು ಈ ಹಿಂದೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಸತೀಶ್ ಜಾರಕಿಹೊಳಿ ಕೂಡಾ ಅಹಿಂದ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಹಾಗೂ ನಾನೂ ಇದನ್ನು ನಿರ್ವಹಿಸಲು ಸಿದ್ದ ಎಂದಿದ್ದಾರೆ

Advertisement

Leave a reply

Your email address will not be published. Required fields are marked *

error: Content is protected !!